ಬೆಂಗಳೂರು: ನಿನ್ನೆ ಸಂಜೆ ಮತ್ತು ರಾತ್ರಿ ಮೂರು ಅಪಘಾತಗಳು ಬೆಂಗಳೂರು ಗ್ರಾಮಾಂತರದ ಮೂರು ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟಿಸಿರುತ್ತದೆ.
ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ, ಸುಲಿಬೆಲೆ ಪೊಲೀಸ್ ಠಾಣೆ ಮತ್ತು ರಾಜನಕುಂಟೆಗಳಲ್ಲಿ ದ್ವಿಚಕ್ರ ವಾಹನ ಮತ್ತು ಕಾರು ಗಳಿಗೆ ಸಿಕ್ಕಿ ಮೃತಪಟ್ಟಿರುತ್ತಾರೆ.
ಬೈರನಹಳ್ಳಿಯಲ್ಲಿ ವಾಸವಾಗಿರುವ ಚಿಕ್ಕ ರಂಗಯ್ಯ(55) ಎಂಬುವರು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆದಾಟುವಾಗ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಮೃತ ಪಾ ಟ್ಟಿರುತ್ತಾರೆ.ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇನೋವಾ ಕಾರ್ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಶಿಡ್ಲಘಟ್ಟ ತಾಲೂಕಿನ ವೆಂಕಟೇಶ್ ನಾರಾಯಣ(50), ಮೃತಪಟ್ಟಿರುತ್ತಾರೆ.
ರಾಜನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವಲಹಳ್ಳಿ ಬಸ್ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಅಪರಿಚಿತ ದ್ವಿಚಕ್ರ ವಾಹನ ರಸ್ತೆ ದಾಟುತ್ತಿದ್ದ ದುರ್ಗೇಶ್(50) ವರ್ಷದವರಿಗೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರತರವಾದ ಪೆಟು ಬಿದ್ದು ಸ್ಥಳದಲ್ಲಿ ಮೃತಪಟ್ಟಿರುತ್ತಾರೆ.