ವಿಜಯ್ ಅಭಿನಯದ ‘ಜನಾ ನಾಯಕನ್’ ಚಿತ್ರದ ಬಿಡುಗಡೆ ಮುಂದೂಡಲಾಗಿದೆ. ಸೆನ್ಸಾರ್ ಪ್ರಮಾಣಪತ್ರ ಸಿಗದ ಕಾರಣ ಈ ನರ್ಧಾರ ತೆಗೆದುಕೊಳ್ಳಲಾಗಿದೆ. ಹೊಸ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಈ ಕಾರಣದಿಂದಾಗಿ ವಿದೇಶಗಳಲ್ಲೂ ಚಿತ್ರದ ಪ್ರರ್ಶನಕ್ಕೆ ಅಡ್ಡಿಯಾಗಿದೆ. ಭಾರತದಲ್ಲಿ ಮೂಲ ತಮಿಳು ಚಿತ್ರಕ್ಕೆ ಅನುಮತಿ ಸಿಗದ ಕಾರಣ ಡಬ್ಬಿಂಗ್ ಆವೃತ್ತಿಗಳಿಗೂ ಸಮಸ್ಯೆ ಎದುರಾಗಿದೆ.
ತಮಿಳು ಚಿತ್ರನಟ ‘ದಳಪತಿ’ವಿಜಯ್ ಅಭಿನಯದ ‘ಜನಾ ನಾಯಕನ್’ ಚಿತ್ರದ ಬಿಡುಗಡೆ ಭಾರತದಲ್ಲಿ ಮುಂದೂಡಲ್ಪಟ್ಟಿದೆ. ಜ. ೯ ರಂದು ಬಿಡುಗಡೆಯಾಗಬೇಕಿದ್ದ ಈ ೫೦೦ ಕೋಟಿ ರೂಪಾಯಿ ಬಜೆಟ್ ನ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ಸಿಕ್ಕಿಲ್ಲ. ೨೦೨೫ರ ಡಿಸೆಂಬರ್ ಅಂತಿಮ ವಾರದಲ್ಲೇ ಅದು ಸೆನ್ಸಾರ್ ವೀಕ್ಷಣೆಗೆ ಹೋಗಿದ್ದ ‘ಜನ ನಾಯಗನ್’ ಸಿನಿಮಾಕ್ಕೆ ಕೆಲವು ಕಟ್ ಗಳನ್ನು ಸೆನ್ಸಾರ್ ಸೂಚಿಸಿತ್ತು. ಆನಂತರ, ಇದನ್ನು ರಿವೈಸಿಂಗ್ ಕಮಿಟಿಯ ಮುಂದೆ ಪ್ರರ್ಶಿಸಬೇಕು ಎಂದು ಸೂಚಿಸಲಾಗಿದೆ.ಆ ಹಿನ್ನೆಲೆಯಲ್ಲಿ, ಚಿತ್ರದ ಬಿಡುಗಡೆಯನ್ನುಮುಂದೂಡಲಾಗಿದೆ.
ಚಿತ್ರದ ಬಿಡುಗಡೆ ಮುಂದೂಡಿರುವುದನ್ನು ಕೆವಿಎನ್ ಪ್ರೊಡಕ್ಷನ್ಸ್ ತನ್ನ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಗಳಲ್ಲಿ ಪ್ರಕಟಣೆ ನೀಡಿದೆ. “ನಮ್ಮ ಅಮೂಲ್ಯ ಪಾಲುದಾರರು ಮತ್ತು ಪ್ರೇಕ್ಷಕರಿಗೆ ಈ ಸುದ್ದಿಯನ್ನು ಹಂಚಿಕೊಳ್ಳಲು ನಾವು ಭಾರವಾದ ಹೃದಯದಿಂದ ಬಂದಿದ್ದೇವೆ. ಜ. ೯ರಂದು ನಿರೀಕ್ಷಿಸಲಾಗಿದ್ದ ‘ಜನಾ ನಾಯಕನ್’ ಬಿಡುಗಡೆಯನ್ನು ನಮ್ಮ ನಿಯಂತ್ರಣಕ್ಕೆ ಮೀರಿದ ಅನಿವರ್ಯ ಕಾರಣಗಳಿಂದ ಮುಂದೂಡಲಾಗಿದೆ” ಎಂದು ತಿಳಿಸಿದೆ.



