ಬೆಂಗಳೂರು: ಬೆಂಗಳೂರಿನಲ್ಲಿ ದಿನೇ ದಿನೇ ಸಂಚಾರದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಬೆಂಗಳೂರು ಸಂಚಾರಿ ಪೊಲೀಸರು ತಂತ್ರಜ್ಞಾನದ ಮೂಲಕ ಸಂಚಾರ ಒತ್ತಡವನ್ನು ಕಡಿಮೆ ಮಾಡಲು ಒಡಂಬಡಿಕೆ ಮಾಡಿಕೊಂಡಿರುತ್ತಾರೆ.
ನಿನ್ನೆ ನಡೆದ ಈ ಸಭೆಯಲ್ಲಿ ಐ ಐ ಎಸ್ ಇಯ ಪ್ರೊ ಫೆಸರ್ ಅಬ್ದುಲ್ ರಾಫ್ ಪಿಂಜರಿ ಮತ್ತು ಜಂಟಿ ಪೊಲೀಸ್ ಆಯುಕ್ತ ಅನುಚ್ಛೇತ್ ರವರು ಒಡಂಬಡಿಕೆಯ ಸಹಿ ಹಾಕಿರುತ್ತಾರೆ.ಬೆಂಗಳೂರು ನಗರದ ಸಂಚಾರ ದತ್ತಾಂಶಗಳನ್ನು ಐ ಐ ಎಸ್ ಇ ಗೆ ವಿನಿಮಯ ಮಾಡಿಕೊಂಡು ಅಗತ್ಯ ಕೃತಕ ಬುದ್ಧಮತ್ತೆ ಯನ್ನು ಉಪಯೋಗಿಸಿಕೊಂಡು ಅಗತ್ಯ ಸಲಹೆಗಳನ್ನು ನೀಡುವುದಲ್ಲದೆ ರಸ್ತೆ ಸುರಕ್ಷತಾ ಆಡಿಟ್ ತರಬೇತಿ ಮತ್ತು ಇಲಾಖೆಯ ಬಲವರ್ಧನೆಗೆ ಸಹಕಾರವನ್ನು ಐ ಐ ಎಸ್ ಸಿ ನೀಡುವುದು.
ಬೆಂಗಳೂರು ನಗರವು ಪ್ರತಿ ತಿಂಗಳು ಸರಿ ಸುಮಾರು 30 ಪೆಟಾ ಬೈಟ್ಸ್ ದತ್ತಾಂಶವನ್ನು ಸೃಜಿಸುತ್ತದೆ. ಈ ದತ್ತಾಂಶವನ್ನು ಭಾರತೀಯ ವಿಜ್ಞಾನ ಸಂಸ್ಥೆಯು ಪರಿಶೀಲಿಸಿ ಬೆಂಗಳೂರು ನಗರದ ಸಂಚಾರದ ಸಮಸ್ಯೆಗೆ ಕಡಿವಾಣ ಹಾಕಲು ಪರಿಹಾರವನ್ನು ಒದಗಿಸುವುದಲ್ಲದೆ ಸುರಕ್ಷತಾ ಕ್ರಮಗಳ ಬಗ್ಗೆಯೂ ಸಹ ಒಳನೋಟವನ್ನು ನೀಡಿ ಸಹಕರಿಸಲಿದೆ.ಈ ಕಾರ್ಯಕ್ರಮದಲ್ಲಿ ಡಿಸಿಪಿ ಸಂಚಾರ ಪೂರ್ವ ವಿಭಾಗದ ಕುಲ್ದೀಪ್ ಕುಮಾರ್ ಜೈನ್ ಮತ್ತು ಐಎಎಸ್ ವಿಜ್ಞಾನಿಗಳು ಉಪಸ್ಥಿತರಿದ್ದರು.