ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಹಲವು ಸಮಯಗಳಿಂದ ಕಾಯುತ್ತಿದ್ದ ದಿನ ಬಂದೇಬಿಟ್ಟಿದೆ. ನಾಳೆ ಡಿಸೆಂಬರ್ 11 ಗುರುವಾರ ಅವರ ಡೆವಿಲ್ ಚಿತ್ರ ಬಿಡುಗಡೆ ಆಗುತ್ತಿದೆ. ಈ ಹೊತ್ತಿನಲ್ಲಿ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಇನ್ಸ್ಟಾಗ್ರಾಂನಲ್ಲಿ ಪತ್ರ ಹಂಚಿಕೊಂಡಿದ್ದಾರೆ. ಅವರು ಬರೆದ ಪತ್ರದ ಸಾರಾಂಶ ಹೀಗಿದೆ:
ನನ್ನ ಪ್ರಿಯ ಸೆಲೆಬ್ರಿಟಿಗಳೇ,
”ಈ ಸಂದೇಶ ನೇರವಾಗಿ ನನ್ನ ಹೃದಯದಿಂದ ಬರುತ್ತಿದೆ, ಮತ್ತು ಅದನ್ನು ನಿಮಗೆ ತಲುಪಿಸುತ್ತಿರುವುದು ನನ್ನ ಪತ್ನಿ ವಿಜಿ. ನಿಮ್ಮ ಪ್ರತಿಯೊಬ್ಬರ ವಿಷಯ — ನಿಮ್ಮ ಪ್ರೀತಿ, ನಿಮ್ಮ ಕಾಳಜಿ, ನಿಮ್ಮ ಅಳಿಯದ ಬೆಂಬಲ, ರಾಜ್ಯದಾದ್ಯಂತ ಮಾಡುತ್ತಿರುವ ನಿಮ್ಮ ಪ್ರಚಾರ — ಇವನ್ನೆಲ್ಲಾ ಅವಳು ನನಗೆ ಪ್ರತೀ ಕ್ಷಣ ಹೇಳುತ್ತಿದ್ದಾಳೆ. ದೂರದಲ್ಲಿದ್ದರೂ, ನೀವು ನನ್ನ ಜೊತೆ ಇರುತ್ತೀರಂತೆ ಅನಿಸುತ್ತಿದೆ



