ಅಂತೂ ಕಳೆದ ಕೆಲ ತಿಂಗಳಿAದ ನಡೆಯುತ್ತಿದ್ದ ಆರ್ ಸಿಬಿಯ ಮಾರಾಟ ಪ್ರಕ್ರಿಯೆ ಇದೀಗ ಮುಗಿದಿದೆ. ಆದಿತ್ಯ ಬಿರ್ಲಾ ಗ್ರೂಪ್ , ಟೈಮ್ಸ್ ಇಂಟರ್ನೆಟ್ ಗ್ರೂಪ್ , ಬೋಲ್ಟ್ ವೆಂಚರ್ಸ್, ಮತ್ತು ಬ್ಲಾಕ್ಸ್ಟೋನ್ನ ಶಾಶ್ವತ ಖಾಸಗಿ ಷೇರು ತಂತ್ರ ಜಂಟಿಯಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಅನ್ನು ಖರೀದಿಸಿವೆ. ಈ ವಹಿವಾಟಿನ ಮೌಲ್ಯ 1.78 ಬಿಲಿಯನ್ ಡಾಲರ್ ಆಗಿದ್ದು ಭಾರತೀಯ ರುಪಾಯಿಗೆ ಪರಿವರ್ತಿಸಿದರೆ ಸುಮಾರು16,706 ಕೋಟಿ ಆಗುತ್ತದೆ. ಇದು ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತವಾಗಿದೆ.ಕ್ರಿಕ್ ಬಝ್ ವರದಿಯ ಪ್ರಕಾರ ಮೇಲೆ ತಿಳಿಸಲಾದ ನಾಲ್ಕು ಗುಂಪುಗಳ ಒಕ್ಕೂಟವು ಯುಕೆ-ಡಿಯಾಜಿಯೊ ಪಿಎಲ್ಸಿಯ ಅಂಗಸAಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್ಎಲ್) ನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 100 ಪ್ರತಿಶತ ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಣಾಯಕ ಒಪ್ಪಂದಕ್ಕೆ ಸಹಿ ಹಾಕಿದೆ. ಹೀಗಾಗಿ ಐಪಿಎಲ್ ಮತ್ತು ಡಬ್ಲ್ಯೂಪಿಎಲ್ನಲ್ಲಿ ಪುರುಷ ಮತ್ತು ಮಹಿಳಾ ತಂಡಗಳ ಒಡೆತನವು ಈ ಒಕ್ಕೂಟದ ಪಾಲಾಗಲಿದೆ.ಈ ಬಗ್ಗೆ ಮಾತನಾಡಿರುವ ಕುಮಾರ ಮಂಗಲA ಬಿರ್ಲಾ ಅವರು, “ಕಳೆದ ಎರಡು ದಶಕಗಳಲ್ಲಿ, ಐಪಿಎಲ್ ಜಾಗತಿಕ ಕ್ರೀಡಾ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ. ಇದು ಭಾರತೀಯ ಕ್ರಿಕೆಟ್ನ ಚಿತ್ರಣವನ್ನೇ ಬದಲಾಯಿಸಿದೆ. ಭಾರತಕ್ಕೆ ಅಗಾಧ ಮೌಲ್ಯವನ್ನು ಸೃಷ್ಟಿಸಿದೆ. ಆಧುನಿಕ ಕ್ರೀಡೆಯಲ್ಲಿ ಅತ್ಯಂತ ಬಲವಾದ ಫ್ರಾಂಚೈಸಿಗಳಲ್ಲಿ ಒಂದಾದ ಆರ್ಸಿಬಿಯು ಆದಿತ್ಯ ಬಿರ್ಲಾ ಗ್ರೂಪ್ಗೆ ತನ್ನ ಸಂಸ್ಥೆ-ನಿರ್ಮಾಣದ ಪರಂಪರೆಯನ್ನು ಜಾಗತಿಕ ಕ್ರೀಡಾ ಕ್ಷೇತ್ರಕ್ಕೆ ವಿಸ್ತರಿಸಲು ಒಂದು ವಿಶಿಷ್ಟ ವೇದಿಕೆಯನ್ನು ಒದಗಿಸಿದೆ. ಈ ಆಸ್ತಿಯ ಪಾಲಕರಾಗಲು ನಾವು ಸಂತೋಷಪಡುತ್ತೇವೆ” ಎಂದು ತಿಳಿಸಿದ್ದಾರೆ.ಇನ್ನು ಟೈಂಸ್ ಇಂಟರ್ನೆಟ್ ಲಿಮಿಟೆಡ್ ನ ಸತ್ಯನ್ ಗಜ್ವಾನಿ ಅವರು ಮಾತನಾಡಿ, “ಐಪಿಎಲ್ನಲ್ಲಿ ಆರ್ಸಿಬಿಯು ಹಾಲಿ ಚಾಂಪಿಯನ್ ಮತ್ತು ಅತ್ಯಂತ ಜನಪ್ರಿಯ ಬ್ರಾ÷್ಯಂಡ್ ಆಗಿದೆ. ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ಆಗಿ ನಮ್ಮ ಪಾಲುದಾರರೊಂದಿಗೆ, ನಾವು ಬೆಂಗಳೂರು ಮತ್ತು ಕರ್ನಾಟಕ ಮತ್ತು ಅದರ ಅದ್ಭುತ ಅಭಿಮಾನಿ ಬಳಗದಲ್ಲಿ ಬೇರೂರಿರುವಾಗ ಆರ್ಸಿಬಿಯನ್ನು ಜಾಗತಿಕ ಕ್ರೀಡಾ ಸಂಸ್ಥೆಯಾಗಿ ನಿರ್ಮಿಸುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.



