ಬೆಂಗಳೂರು: ಅತ್ತಿಬೆಲೆ ಪೊಲೀಸ್ ಅಣ್ಣ ವ್ಯಾಪ್ತಿಯ ಟಿವಿಎಸ್ ರಸ್ತೆಯ ಬಳಿ ಇರುವ ಬಂಧನ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ಟಿಪ್ಪರ್ ಲಾರಿ ಮೋಟರ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಶೋಭಾ(೪೫) ಎಂಬ ಹಿಂಬದಿ ಸವಾರಣಿ ಮೃತಪಟ್ಟರೆ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ರಮ್ಯಾಗೆ ತೀವ್ರತರವಾದ ಗಾಯ ಸಂಭವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಅತ್ತಿಬೆಲೆ ಪೊಲೀಸರು ಅಪಘಾತ ಪ್ರಕರಣ ದಾಖಲು ಮಾಡಿಕೊಂಡು ಟಿಪ್ಪರ್ ಲಾರಿ ಚಾಲಕರನ್ನು ಬಂಧಿಸಿ ಕ್ರಮ ಕೈಗೊಂಡಿರುತ್ತಾರೆ.



