ರಾಂಚಿ: ಗುಜರಾತ್ ಟೈಟಾನ್ಸ್ ಕ್ರಿಕೆಟಿಗ ರಾಬಿನ್ ಮಿಂಝ್ ಶನಿವಾರ ಬೈಕ್ ಅಪಘಾತಕ್ಕೆ ಸಿಲುಕಿ ಗಾಯಗೊಂಡಿದ್ದಾರೆ. ಅವರ ಬಲ ಮೊಣಕಾಲಿಗೆ ತರಚು ಗಾಯವಾಗಿದ್ದು, ರಾಂಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಬಿನ್ ಮಿಂಝ್ ತಮ್ಮ ಕವಾಸಕಿ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಅಪಘಾತವಾಗಿದೆ.ಎದುರಿನಿಂದ ಬರುತ್ತಿದ್ದ ಮತ್ತೊಂದು ಬೈಕ್ಗೆ ಢಿಕ್ಕಿಯಾದ ಪರಿಣಾಮ ರಾಬಿನ್ ಅವರ ಬೈಕ್ ನಜ್ಜುಗುಜ್ಜಾಗಿದೆ.
ಘಟನೆ ಬಗ್ಗೆ ಮಾತನಾಡಿದ ರಾಬಿನ್ ತಂದೆ ಫ್ರಾನ್ಸಿಸ್ ಮಿಂಝ್, ಬೇರೊಂದು ಬೈಕ್ ಎದುರಿನಿಂದ ಬಂದ ವೇಳೆ ರಾಬಿನ್ ತನ್ನ ಬೈಕ್ನ ನಿಯಂತ್ರಣ ಕಳೆದುಕೊಂಡಿದ್ದಾರೆ. ಇದೇನೂ ಗಂಭೀರ ಅಪಘಾತವಲ್ಲ ಎಂದಿದ್ದಾರೆ. ಐಪಿಎಲ್ ಹರಾಜಿನಲ್ಲಿ ಮಿಂಝ್ 3.6 ಕೋಟಿರೂ.ಗೆ ಗುಜರಾತ್ ಟೈಟಾನ್ಸ್ ಪಾಲಾಗಿದ್ದರು.