ಜೂನ್ 26 ಬುಧವಾರ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ನಡೆಯಲಿವೆ. ಸೆಮಿಫೈನಲ್ ಪಂದ್ಯಗಳಿಗಾಗಿ ವಿಶ್ವದೆಲ್ಲೆಡೆ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಭಾರತ ಎರಡನೇ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲಲು ಕೇವಲ 2 ಗೆಲುವಿನ ಅಂತರದಲ್ಲಿದೆ. ಇನ್ನೂ ಒಂದು ಹೆಜ್ಜೆ ಮುಂದಿಡಲು ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ 2024ರ ಎರಡನೇ ಸೆಮಿಫೈನಲ್ ಪಂದ್ಯಕ್ಕೆ 7 ಗಂಟೆ 20 ನಿಮಿಷಗಳು ಕಾಲಾವಕಾಶ ನೀಡಲಾಗಿದೆ. ಟಿ20 ಕ್ರಿಕೆಟ್ನ ಎರಡೂ ಇನ್ನಿಂಗ್ಸ್ಗಳಿಗೆ ತೆಗೆದುಕೊಂಡ ಸಮಯ ಸರಿಸುಮಾರು 3 ಗಂಟೆ 10 ನಿಮಿಷಗಳು.ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ನಿರೀಕ್ಷೆಯಿದೆ.
ಇಂತಹ ಪರಿಸ್ಥಿತಿಯಲ್ಲಿ ನಿರಂತರವಾಗಿ ಮಳೆ ಸುರಿದು ನಿಲ್ಲದಿದ್ದಲ್ಲಿ ಪಂದ್ಯದ ಸಮಯದ ಹೊರತಾಗಿ 4 ಗಂಟೆ 10 ನಿಮಿಷಗಳನ್ನು ಹೆಚ್ಚುವರಿಯಾಗಿ ನೀಡಲಾಗುವುದು. ಇದಾದ ಬಳಿಕವೂ ಮಳೆ ನಿಲ್ಲದೇ ಪಂದ್ಯ ರದ್ದುಗೊಂಡರೆ ಭಾರತ ತಂಡ ಫೈನಲ್ಗೆ ಅರ್ಹತೆ ಪಡೆಯಲಿದೆ.ಆದರೆ, ಮಳೆ ಮಧ್ಯದಲ್ಲಿ ನಿಂತರೆ, ಓವರ್ಗಳನ್ನು ತಡವಾಗಿ ಕಡಿಮೆ ಮಾಡಿ ಪಂದ್ಯವನ್ನು ಪ್ರಾರಂಭಿಸಬ ಹುದು. ಪಂದ್ಯದ ವೇಳೆ ಶೇ.51 ರಷ್ಟು ಮಳೆಯಾಗುವ ಸಾಧ್ಯತೆ ಇದ್ದು, ಅದಕ್ಕಾಗಿ ಯಾವುದೇ ಮೀಸಲು ದಿನವನ್ನು ಇರಿಸಲಾಗಿಲ್ಲ. ಜೂನ್ 29 ರಂದು ಟಿ20 ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ.