ಈಗ ನಾವು 21ನೇ ಶತಮಾನದಲ್ಲಿದ್ದೇವೆ, ಹೊಸ ಹೊಸ ಆವಿಷ್ಕಾರಗಳು ನಮ್ಮನ್ನು ಹಳೆಯ ಎಷ್ಟೋ ಅದ್ಭುತ ಆವಿಷ್ಕಋಗಳನ್ನು ಮರೆಸಿವೆ. ಇಂತಹ ಒಂದು ಅವಿಷ್ಕಾರಗಳಲ್ಲಿ ಆಕಾಶವಾಣಿ ರೇಡಿಯೋ ಕೂಡ ಒಂದು. ರೇಡಿಯೋವನ್ನು ಗುಗ್ಲಿಮೋ ಮಾರ್ಕೋನಿಯು 1890ರ ದಶಕದಲ್ಲಿ ಕಂಡು ಹಿಡಿದನು.
ನಿಕೋಲ ಟೆಸ್ಲಾ 1893ರಲ್ಲಿ ಮೊದಲ ಬಾರಿಗೆ ರೆಡಿಯೋದ ಕಾರ್ಯ ನಿರ್ವಹಣೆಯನ್ನು ಪ್ರದರ್ಶಿಸಿದನು ಎಂದು ಹೇಳಲಾಗುತ್ತದೆ. ಆವಿಷ್ಕಾರ ಮಡಿದ ಮತ್ತು ರೇಡಿಯೋ ಕೆಲಸ ನಿರ್ವಣೆಯನ್ನು ಹೇಳಿದ ಇಬ್ಬರೂ ವಿಜ್ಞಾನಿಗಳಿಗೆ ಅವರು ಮಾಡಿದ ಆವಿಷ್ಕಾರದ ಮಹತ್ವ ಅಷ್ಟಾಗಿ ತಿಳಿದಿರಲಿಲ್ಲ.
ಮುಂದೆ 1910ರಲ್ಲಿ ಲೀ ಡೀ ಫಾರೆಸ್ಟ್ ಸಾರ್ವಜನಿಕವಾಗಿ ರೇಡಿಯೋದ ಪಬ್ಲಿಕ್ ಬ್ರಾಡ್ ಕಾಸ್ಟ ಮಾಡಿದನು ಬಹಳ ದೂರದವರೆಗೂ ಎಲೆಕ್ಟ್ರೋ ಮ್ಯಾಗ್ನೆಟಿಕ್ ವೇವಗಳ ಕೆಲಸ ನಿರ್ವಹಣೆಯಿಂದ ಧ್ವನಿಯ ಮೂಲಕ ಎಲ್ಲೆಡೆ ತಲುಪಲು ಸಹಾಯಕವಾಯಿತು. 19ನೇ ಶತಮಾನದಲ್ಲಿ ಯುದ್ಧದ ಸಮಯದಲ್ಲಿ ಸೈನಿಕರಿಗೆ ಮತ್ತು ಜನರಿಗೆ ದೇಶದ ಸ್ಥಿತಿಗತಿ ಹಾಗೂ ವಾತಾವರಣ ತಿಳಿಸಲು ಬಹಳ ಉಪಯುಕ್ತ ಸಂಪರ್ಕ ಮಾಧ್ಯಮವಾಗಿ ರೇಡಿಯೋ ಪರಿಣಿಸಿತು.
ಮೊದಲು ರೇಡಿಯೋ ಕಾರ್ಯಕ್ರಮವು ಆಗಸ್ಟ್ 31 , 1920ರಲ್ಲಿ ಬಿತ್ತರಗೊಂಡಿತು. ಭಾರತದಲ್ಲಿ ಮೊದಲ ಬಾರಿಗೆ 1956ರಲ್ಲಿ ಅಖಿಲ ಭಾರತ ರೇಡಿಯೋ ಆಲ್ ಇಂಡಿಯಾ ರೇಡಿಯೋದಲ್ಲಿ ಸುದ್ದಿ ಹಾಗೂ ಕಾರ್ಯಕ್ರಮಗಳು ಬಿತ್ತರ ಗೊಂಡವು. ವಿವಿಧ ಭಾರತಿ ಕಾರ್ಯಕ್ರಮಗಳು 1957ರಲ್ಲಿ ಬಿತ್ತರಗೊಂಡವು. ಭಾರತದಲ್ಲಿ ರೇಡಿಯೋ ಕಂಡು ಹಿಡಿದವರು ಜಗದೀಶ ಚಂದ್ರ ಬೋಸ್ರವರು ಆದರೆ ಭಾರತೀಯರಿಗೆ ಪರಿಚಯಿಸಿದವರು ಲಿಯೋನಲ್ ಫೀಲ್ಡೆನ್ ಮೊದಲ ಬ್ರಾಡ್ ಕಾಸ್ಟ್ ಕಂಟ್ರೋಲರ್ ಆಗಿ 1935-ರಿಂದ 1937ರವರಿಗೆ ಮಹತ್ತರವಾದ ಕಾರ್ಯಗಳನ್ನು ಮಾಡಿದರು.
ಪ್ರಪಂಚದಲ್ಲಿ ಮೊದಲಿಗೆ ಬಿತ್ತರಗೊಂಡ ರೇಡಿಯೋ ಸ್ಟೇಷನ್ ಪಿಟ್ಸ್ಬರ್ಗಸ್ ಕೆಡಿಕೆಎ ಇದೊಂದು ಅಮೆರಿಕನ್ ಟೇಡಿಯೋ ಸ್ಟೇಷನ್. 1936ರಲ್ಲಿ ಆಲ್ ಇಂಡಿಯಾ ರೇಡಿಯೋ ಆರಂಭವಾಯಿತು. ಏಫ್ ರೇಡಿಯೋಗಳು ಖಾಸಗಿ ವಾಹಿನಿಗಳು 2001ರಲ್ಲಿ ಭಾರತದಲ್ಲಿ ಮೊದಲಬಾರಿಗೆ ಖಾಸಗಿ ರೇಡಿಯೋ ಚಾನೆಲ್ ಅರಂಭವಾಯಿತು. ರಾಷ್ಟ್ರ ಕವಿ ರವೀಂಧ್ರನಾಥ ಟ್ಯಾಗೋರರರು ಅಖಿಲ ಭಾರತ ರೇಡಿಯೋ ಗೆ ಆಕಾಶವಾಣಿ ಎಂದು ನಾಮಕರಣ ಮಾಡಿದರು.
ಅಂದಿನ ಕಾಲದಲ್ಲಿ ಅಂದರೆ 1920ರಿಂದ 1980-90ರ ದಶಕದವರೆಗೂ ಬಹಳ ಪ್ರಮುಖ ಸುದ್ಧಿ ಮಾಧ್ಯಮ ಶ್ರವ್ಯ ಮಾಧ್ಯಮವಾಗಿ ಜನರಿಗೆ ಸಂಪರ್ಕ ಹಾಗೂ ಮನರಂಜನೆಯ ಮಾಧ್ಯಮವಾಗಿ ಕೆಲಸ ನಿರ್ವಹಿಸಿತು. ಕ್ರಿಕೆಟ್ ಕಾಮೆಂಟ್ರಿ, ನಾಟಕ ಸಿನೆಮಾ, ಎಲ್ಲ ಬಗೆಯ ಹಾಡುಗಳು ವಾರ್ತೆ ಎಲ್ಲವನ್ನೂ ರೇಡಿಯೋ ಮೂಲಕವೇ ಕೇಳಲಾಗುತಿತ್ತು. ಸಣ್ಣ ಮಕ್ಕಳಿಗೆ ರೇಡಿಯೋ ಯಂತ್ರದೊಳಗೆ ಯಾರೋ ಕುಳಿತು ಹಾಡುತ್ತಿದ್ದಾರೆ, ಮಾತನಾಡುತ್ತಿದ್ದಾರೆ ಎಂಬ ಭಾವನೆಯೂ ಇತ್ತು. ಇಂದಿನ ಮಕ್ಕಳಿಗೆ ಅಂತಹ ರೇಡಿಯೋ ನೋಡಲು ಸಿಗುವುದಿಲ್ಲ. ಅವರಿಗೆ ಆಕಾಶವಾಣಿ ಕೇಂದ್ರಗಳ ಪರಿಚಯವೂ ಇಲ್ಲ.
ಹಳೆಯ ಸಾಧನಗಳ ಬದಲು ಹೊಸದು ಆಕ್ರಮಿಸುವಂತೆ ಏಫ್.ಎಮ್ ರೇಡಿಯೋಗಳೇ ಹೆಚ್ಚು ಮಾಹಿತಿ ಬಿತ್ತರಗೊಳ್ಳುವುದಕ್ಕಿಂತ ಮನೋರಂಜನೆಯೇ ಹೆಚ್ಚಾಗಿದೆ. ಮೊದಲು ಕೂಡ ಬೆಳಗ್ಗೆ ಸುಪ್ರಭಾತದಿಂದ ಹಿಡಿದು ರಾತ್ರಿ 11ರವೆಗೆ ಕಾರ್ಯ ನಿರ್ವಹಿಸುತ್ತಿದ್ದ ಆಕಾಶವಾಣಿಗಳು ಈಗ ಎಫ್ ಎಂ ಇರುವ ಕಾರಣ 24 ಗಂಟೆ ಕಾರ್ಯನಿರ್ವಹಿಸುತ್ತದೆ. ಆದರೆ ಮಧ್ಯದಲ್ಲಿ ಸ್ವಯಂ ಚಾಲಿತ ಹಾಡುಗಳು ಬಿತ್ತರಗೊಳ್ಳುತ್ತವೆ.
ಇಂದಿಗೂ ಹಳ್ಳಿಗಳಲ್ಲಿ ದೂರದರ್ಶನದಷ್ಟೇ ಮಹತ್ವ ರೆಡಿಯೋಗೆ ಇದೆ. ಏಕೆಂದರೆ ದೂರದರ್ಶನ ವೀಕ್ಷಿಸಲು ವಿದ್ಯತ್ತಿನ ಅವಶ್ಯಕತೆ ಇದೆ. ಆಕಾಶವಾಣಿಗೆ ವಿದ್ಯುತ್ತಿನ ಅವಶ್ಯಕತೆ ಬರುವುದಿಲ್ಲ. ಭಾರತೀಯ ಆಲ್ ಇಂಡಿಯಾ ರೇಡಿಯೋ ಪ್ರಸಾರ ಭಾರತಿ ಆಡಿಯಲ್ಲಿ ಕೆಲಸ ಮಾಡುತ್ತದೆ. ಆಕಾಶವಾಣಿಯ ಘೋಷ ವಾಕ್ಯ ಬಹುಜನರ ಹಿತಾಯ ಬಹುಜನ ಸುಖಾಯ ಎಂದಾಗಿದೆ.
ಇಂತಹ ಪ್ರಭಾವಿ ಮಾಧ್ಯಮದ ಬಳಕೆ ಕಡಿಮೆಯಾಗಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಉಪಯುಕ್ತವಿರುವುದರಿಂದ ಇಂದಿಗೂ ಪ್ರಧಾನಮಂತ್ರಿಯವರು ಆಕಾಶವಾಣಿಯ ಮೂಲಕ ತಮ್ಮ “ಮನ್ ಕಿ ಬಾತ್” ಕಾರ್ಯಕ್ರಮದ ಮೂಲಕ ಜನರನ್ನು ತಲುಪುತ್ತಾರೆ. ಈಗಂತೂ ಮೊಬೈಲ್ಗಳಲ್ಲಿ ಕೂಡ ಆಕಾಶವಾಣಿಯ ಕಾರ್ಯಕ್ರಮಗಳನ್ನು ಎಫ್ ರೇಡಿಯೋಗಳನ್ನು ಆಲಿಸಬಹುದಾಗಿದೆ. ಇಂದಿನ ರೇಡಿಯೋ ದಿನದ ಪ್ರಯುಕ್ತ ನಾವು ಕೂಡ ಒಂದು ರೇಡಿಯೊ ಕಾರ್ಯಕ್ರಮವನ್ನು ಕೇಳಿ ಆಚರಿಸಬಹುದಾಗಿದೆ.
ಮಾಧುರಿ ದೇಶಪಾಂಡೆ, ಬೆಂಗಳೂರು