ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದು ದ್ವಿತೀಯ ಏಕದಿನ ಪಂದ್ಯಪೋರ್ಟ್ ಆಫ್ ಸ್ಪೇನ್ ಮೈದಾನದಲ್ಲಿ ನಡೆಯಲಿದೆ.
ಮೊದಲ ಏಕದಿನ ಪಂದ್ಯವನ್ನು ಟೀಂ ಇಂಡಿಯಾ ಭರ್ಜರಿಯಾಗಿ 8 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಹೊಂದಿದೆ.ಕಳೆದ ಪಂದ್ಯದಲ್ಲಿ ಬೌಲರ್ ಗಳು ಅದರಲ್ಲೂ ವೇಗಿಗಳು ಅದ್ಭುತ ಪ್ರದರ್ಶನ ನೀಡಿದ್ದರು. ಬ್ಯಾಟಿಂಗ್ ಕೂಡಾ ಕೈ ಹಿಡಿದಿತ್ತು. ಹೀಗಾಗಿ ಮತ್ತೆ ಅಂತಹದ್ದೇ ಆಲ್ ರೌಂಡರ್ ಪ್ರದರ್ಶನ ತೋರುವ ವಿಶ್ವಾಸದಲ್ಲಿ ಭಾರತವಿದೆ.
ಅತ್ತ ದ.ಆಫ್ರಿಕಾ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಕೈ ಕೊಟ್ಟಿದ್ದು ತಂಡಕ್ಕೆ ದುಬಾರಿಯಾಯ್ತು. ಮತ್ತೆ ಆ ತಪ್ಪು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕಿದೆ. ಇತ್ತ ಟೀಂ ಇಂಡಿಯಾ ಇಂದಿನ ಪಂದ್ಯ ಗೆದ್ದರೆ ಸರಣಿ ಕೈವಶ ಮಾಡಿಕೊಳ್ಳಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಸಂಜೆ 4.30 ಕ್ಕೆ ಆರಂಭವಾಗುವುದು.