ವಿಶ್ವ ಕವಿತೆ ದಿನವನ್ನು ಮಾರ್ಚ 21ನೇ ತಾರೀಕಿನಂದು ಆಚರಿಸಲಾಗುತ್ತದೆ. ವಿಶ್ವ ಸಂಸ್ಥೆಯು “ಮನುಷ್ಯರ ವಿಶೇಷವಾದ ಸೃಜನಾತ್ಮಕ ಬುದ್ಧಿವಂತಿಕೆಯನ್ನು ಗುರುತಿಸಲು ವಿಶ್ವ ಕವಿತೆಯ ದಿನವನ್ನು 1999ರಿಂದ ಆಚರಿಸಲು ಆರಂಭಿಸಿದರು. ರಾಷ್ಟ್ರೀಯ ಕವಿತಾ ದಿನವನ್ನು ಅಕ್ಟೋಬರ್ ತಿಂಗಳಿನ ಮೊದಲನೇ ಗುರುವಾರದಂದು ಆಚರಿಸಲಾಗುತ್ತದೆ.
ಯುವ ಕವಿಗಳ ಕವಿತಾ ರಚನೆಗೆ ಪ್ರೋತ್ಸಾಹ ನೀಡಲು 2024ರ ವಿಶ್ವ ಕವಿತಾ ದಿನದ ಥೀಮ್ ” ದೈತ್ಯ ಪ್ರತಿಭೆಗಳ ಹೆಗಲ ಮೇಲೆ ನಿಲ್ಲುವುದ” ಎಂಬುದಾಗಿದೆ. ಉತ್ತಮ ಸಾಹಿತ್ಯದ ರಚನೆಗೆ ಹಿರಿಯ ಕವಿಗಳ ಅನುಭವವನ್ನು ಓದಿ ತಿಳಿದು ಅದರ ಸರಿಯಾದ ಪ್ರಯೋಜನ ಪಡೆದು ಉತ್ತಮ ಕವಿತ್ವ ರಚನೆಯನ್ನು ಮಾಡುವ ಉದ್ದೇ ಶದಿಂದ ಈ ಬಾರಿಯ ಥೀಮ್ ದೊಡ್ಡ ದೊಡ್ಡ ಕವಿಗಳನ್ನು ಅನುಸರಿಸಿ ಉತ್ತಮ ಸೃಜನಾತ್ಮಕತೆಯನ್ನು ಹೆಚ್ಚಿಸಿಕೊಳ್ಳುವ ಗುರಿಯನ್ನು ಹೊಂದಿದೆ.
ಕವಿತೆ ಕವಿಯ ಮನದ ಅದ್ಭುತವಾದ ಭಾವನೆಯನ್ನು ಕೆಲವೇ ಪದಗಳಲ್ಲಿ ಕಟ್ಟಿ ಹಾಕುವ ಕಲೆ. ಸುಂದರ ರಸಾನುಭೂತಿ, ಸೂಕ್ತ ಪದಗಳ ಜೋಡನೆ, ಲಯಬದ್ಧವಾದ ಸಾಲುಗಳ ರಚನೆ, ಗೇಯತೆ ಕವಿತೆಯ ವಿಶೇಷತೆಯಾಗಿರುತ್ತದೆ. ಒಂದು ಕಥೆ, ಇತಿಹಾಸ ಘಟನೆಯನ್ನು ಕೆಲವೇ ಪದಗಳಲ್ಲಿ ಕಟ್ಟಿ ಹಾಕುವುದು ಅದ್ಭುತವಾದ ಕಲೆಯೇ ಆಗಿದೆ.
ಹಿಂದಿನ ಕಾಲದಲ್ಲಿ ವಿದ್ಯೆಯನ್ನು ಕಲಿಯದವರು ಕೂಡ ಹಾಡುಗಳನ್ನು ಕಟ್ಟಿ ಹಾಕುವ ಸುಂದರ ಕಲೆಯನ್ನು ಕಲಿತಿದ್ದರು ಹೀಗೆಯೇ ಜಾನಪದ ಪದ ಹಾಡುಗಳು ಹುಟ್ಟಿ ಕೊಂಡಿದ್ದು, ಕವಿಯಿಂದ ಏನು ಪ್ರಯೋಜನ ಎಂಬುದು ಇಂದಿನ ಯುವ ಜನರ ಪ್ರಶ್ನೆಯಾಗಿದೆ? ಕವಿತೆ ಓದುವುದರಿಂದ ಏನು ಪ್ರಯೋಜನವೆಂದು ಕೇಳಿದರೆ ಮನಸ್ಸಿಗೆ ಆನಂದವು ಉಂಟಾಗುವತ್ತದೆ.
ಇತ್ತೀಚಿಗೆ ಕವಿತಾ ರಚನೆಗೆ ಬಹಳ ಪ್ರೋತ್ಸಾಹ ನೀಡುತ್ತಲಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಹಳೆಗನ್ನಡ ಕಾಲದಿಂದಲೂ ಕಾವ್ಯ ರಚನೆ ಉತ್ತಮವಾಗೇ ನಡೆಯುತ್ತಿತ್ತು. ಛಂದಸ್ಸು ಅಲಂಕಾರ ಬದ್ಧ ಹಳೆಯ ಕವಿತೆಯ ರಚನೆ ಕಷ್ಟಕರವೆಸಿಸುವಾಗ ಆಂಗ್ಲ ಸಾಹಿತ್ಯದ ಪ್ರಭಾದ ನವೋದಯ ಸಾಹಿತ್ಯದ ರಚನೆ ಆರಂಭವಾಗಿ ಎರಡು ದಶಮಾನಗಳಿಂದ ನವ್ಯಕವ್ಯದ ರಚನೆಯಾಗುತ್ತಿದೆ.
ನವ್ಯಕಾವ್ಯದಲ್ಲಿ ಪದ ಅಥವಾ ವಾಕ್ಯಗಳ ಮಿತಿ ಯಾವುದೇ ನಿಯಮವಿರದೇ ಹೋದರು ಲಯಬದ್ಧತೆ ವಿಚಾರದ ಸ್ಪಷ್ಟತೆ ಹೇಳುವ ರೀತು ಮಹತ್ವವನ್ನು ಪಡೆಯುತ್ತದೆ.ಎಲ್ಲ ಭಾಷೆಯ ಕವಿತೆಗಳೂ ಅದರದೇ ಆದ ಸೊಗಡನ್ನು ಪಡೆದಿವೆ. ಒಂದು ಭಾಷೆಯ ಕವಿತೆಗಳು ಇನ್ನೊಂದು ಭಾಷೆಗೆ ಅನುವಾದಗೊಳ್ಳುವುದು. ವಿವಿಧ ಭಾಷೆಯ ಕವಿಗಳ ಹೊಸ ಹೊಸ ಪ್ರಯೋಗಗಳು, ಟಂಕಾ, ಹಾಯ್ಕ, ತನಗ ಮೊದಲಾದ ವಿದೇಶಿ ಹಾಗೂ ದೇಶೀಯ ಕವಿತಾ ಪ್ರಕಾರವನ್ನು ಸಾಮಾಜಿಕ ಜಾಲತಾಣಗಳು ಪ್ರಸಿದ್ಧಿಗೆ ತರುವುದರ ಜೊತೆಗೆ ಪ್ರೋತ್ಸಾಹವನ್ನು ನೀಡುತ್ತಿವೆ.
ಈ ನಿಟ್ಟಿನಲ್ಲಿ ಅನೇಕ ಸಾಮಾಜಿಕ ಜಾಲತಾಣದ ಸಾಹಿತ್ಯಿಕ ಗುಂಪುಗಳು ಶ್ರಮಿಸುತ್ತಿವೆ. ಹೊಸ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದಲ್ಲದೇ ಹೊಸ ಕವಿಗಳ ಉದಯವೂ ಆಗುತ್ತಿದೆ. ಹಿಂದಿನ ಕಾಲದಲ್ಲಿ ಕೆಲವೇ ಜನರ ಕೆಲವೇ ವೃತಿಯ ಜನರ ಕೈಗೂಸಾಗಿದ್ದ ಕವಿತೆ ಇಂದು ಎಲ್ಲರ ತರಬೇತಿ ಪಡೆದು ಕಲಿಯ ಬಹುದಾದ ವಿದ್ಯೆಯಾಗಿದೆ.
ವಿಶ್ವ ಕವಿತಾ ದಿನವನ್ನು ಕವಿತೆಯ ಕುರಿತಾದ ಕಾರ್ಯಾಗಾರವನ್ನು ನಡೆಸುವುದು, ತರಬೇತಿ ನೀಡುವುದರ ಮೂಲಕ ಆಚರಿಸುತ್ತಾರೆ. ಕವಿತೆಯ ದಿನದ ವಿಶೇಷ ಕವಿ ಗೋಷ್ಠಿಗಳನ್ನು ಕೂಡ ಆಚರಿಸುತ್ತಾರೆ.
– ಮಾಧುರಿ ದೇಶಪಾಂಡೆ, ಬೆಂಗಳೂರು