ಕನಕಪುರ: ಇಂದಿನ ಯುವಕರೇ ನಾಳೆ ನಮ್ಮ ದೇಶದ ಹೆಮ್ಮೆಯ ವಿಜ್ಞಾನಿಗಳಾಗಿ ಹೊರಹೊಮ್ಮಲಿದ್ದು ಅವರನ್ನು ಗುರುತಿಸಿ ಪ್ರೋತ್ಸಾಹಿಸುವಂತಹ ಕೆಲಸವನ್ನು ನಾವುಗಳು ಮಾಡಬೇಕಾಗಿದೆ ಎಂದು ಡಿ ಸಿ ಎಂ ಡಿಕೆ ಶಿವಕುಮಾರ್ ತಿಳಿಸಿದರು.
ಕನಕೋತ್ಸವ ಅಂಗವಾಗಿ ನಗರದ ಸೆಂಟ್ ಥಾಮಸ್ ಶಾಲೆಯಲ್ಲಿ ಆಯೋಜಿಸಿಲಾಗಿರುವ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿ ಮಕ್ಕಳು ನಿ ತಯಾರಿಸಿರುವ ವಿಜ್ಞಾನದ ಪ್ರಾಯೋಗಿಕ ಮಾದರಿಗಳನ್ನು (ಪ್ರಾಜೆಕ್ಟ್ ಗಳನ್ನು) ವೀಕ್ಷಿಸಿ ಮಾತನಾಡಿದ ಅವರು ನಮ್ಮ ಮಕ್ಕಳ ವಿಜ್ಞಾನದ ಪ್ರಯೋಗಗಳು ಅಚ್ಚರಿ ಜೊತೆಗೆ ಹೆಮ್ಮೆಯನ್ನು ತಂದಿದ್ದು ಈ ವಿಜ್ಞಾನ ವಸ್ತು ಪ್ರದರ್ಶನವು ಸಮಾಜದ ಅಭಿವೃದ್ಧಿಗೆ ನವೀನ ಚಿಂತನೆಯ ಒಂದು ಉತ್ತಮ ವೇದಿಕೆಯಾಗಿದೆ, ಮಕ್ಕಳು ಬಹಳ ಉತ್ಸಾಹ ಹಾಗೂ ಸಂಭ್ರಮದಿAದ ತಮ್ಮ ಚಿಂತನೆಗಳನ್ನು ಅತ್ಯುತ್ತಮವಾಗಿ
ಪ್ರದರ್ಶಿಸಿದ್ದು ಅವರ ಮುಂದಿನ ಭವಿಷ್ಯ ಉಜ್ವಲವಾಗಿ ರಲಿ ಹಾಗೂ ದೊಡ್ಡ ವಿಜ್ಞಾನಿಗಳಾಗಿ ಬೆಳೆದು ತಾಲ್ಲೂಕಿಗೆ ರಾಜ್ಯಕ್ಕೆ, ದೇಶಕ್ಕೆ ಹೆಮ್ಮೆ ತರಲಿ ಎಂದು ಹಾರೈಸಿದರು.
ನಂತರ ಕನಕೋತ್ಸವ ವೇದಿಕೆಗೆ ಆಗಮಿಸಿ ವಾಯ್ಸ್ ಆಪ್ ಕನಕೋತ್ಸವದಲ್ಲಿ ಭಾಗಿಯಾಗಿ ಮಕ್ಕಳ ಗಾಯನ ವೀಕ್ಷಿಸಿ ವಿಜೇತರಿಗೆ ಬಹುಮಾನವನ್ನು ವಿತರಣೆ ಮಾಡಿ ಸಮಾರಂಭಕ್ಕೆ ಆಗಮಿಸಿದ ಪಕ್ಷದ ಮುಖಂಡರಿಗೆ ಸನ್ಮಾನಿಸಿ ಗೌರವಿಸಿದರು,ದಂಪತಿಗಳ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ ಹಾಗೂ ರಘು ದೀಕ್ಷಿತ್ ತಂಡದವರ ರಸಮಂಜರಿ ಕಾರ್ಯಕ್ರಮದಲ್ಲಿ ಚಲನಚಿತ್ರ ನಟರಾದ ಶಿವರಾಜ್ ಕುಮಾರ್, ಉಪೇಂದ್ರ, ರಚಿತಾ ರಾಮ್ ಸೇರಿದಂತೆ ಹಿರಿ-ಕಿರುತೆರೆ ನಟರು ಭಾಗವಹಿಸಿ ಈ ಭವ್ಯ ಸಮಾರಂಭಕ್ಕೆ ಮೆರಗು ನೀಡಿದರು.
ವಿಧಾನ ಪರಿಷತ್ ಸದಸ್ಯ ರಾಮೋಜಿಗೌಡ, ಎಸ್ ರವಿ, ನಾಗರಾಜ್ ಯಾದವ್, ಸುಧಾಮ್ ದಾಸ್, ಬಮೂಲ್ ಅಧ್ಯಕ್ಷ ಡಿ. ಕೆ ಸುರೇಶ್, ಯೋಗ ಗುರು ವಚನಾನಂದ ಸ್ವಾಮೀಜಿ ಸೇರಿದಂತೆ ಪಕ್ಷದ ಶಾಸಕರು ಹಾಗೂ ಮುಖಂಡರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಇಂದಿನ ಮಕ್ಕಳೇ ಮುಂದಿನ ವಿಜ್ಞಾನಿಗಳು: ಡಿಕೆ ಶಿವಕುಮಾರ್



