ಕಲಬುರಗಿ: ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪುರದಲ್ಲಿ ಸರ್ಕಾರ ಇಂದು ನಡೆಯಬೇಕಿದ್ದ ಆರ್ಎಸ್ಎಸ್ ಪಥ ಸಂಚನಲನಕ್ಕೆ ಅನುಮತಿ ನೀಡಲು
ನಿರಾಕರಿಸಿದೆ. ಪಥಸಂಚಲನಕ್ಕೆ ಅನುಮತಿ ನೀಡಿದರೆ ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆ ಎಂಬ ಕಾರಣ ನೀಡಿ ಆರ್ಎಸ್ಎಸ್ ಪಥ ಸಂಚಲನಕ್ಕೆ ತಾಲೂಕು ತಹಶೀಲ್ದಾರ್ ನಾಗಯ್ಯ ಅನುಮತಿ ನೀಡಲು ನಿರಾಕರಿಸಿದ್ದಾರೆ. ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಜೀವಬೆದರಿಕೆ ಹಾಕಿದ್ದನ್ನು
ಖಂಡಿಸಿ ತವರು ಕ್ಷೇತ್ರದಲ್ಲಿ ಬಂದ್ ನಡೆಸಿ ಪ್ರತಿಭಟನೆ ನಡೆಸಲಾಗಿದೆ.ಆರ್ಎಸ್ಎಸ್ ಪಥಸಂಚಲನದ ವಿರುದ್ಧವಾಗಿ ಭೀಮ್ ಆರ್ಮಿ ಸಂಘಟನೆ ಹಾಗೂ ಭಾರತೀಯ ದಲಿತ ಪ್ಯಾಂಥರ(ರಿ) ಸಂಘದ ಸದಸ್ಯರು.ಅದೇ ಮಾರ್ಗವಾಗಿ ಪಥಸಂಚಲನ ಮಾಡಲು ಅನುಮತಿ ಕೋರಿದ್ದಾರೆ. ಇಂದು ಎಲ್ಲಾ ಸಂಘಟನೆಗಳು ಒಂದೇ ಮಾರ್ಗದಲ್ಲಿ ಪಥಸಂಚಲನ ನಡೆಸಿದರೆ ಗೊಂದಲ ಉಂಟಾಗಿ ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಸಂಘಟನೆಗಳಿಗೆ ಪಥಸಂಚಲನ ಮಾಡಲು ಅನುಮತಿ ನೀಡುವುದಿಲ್ಲ ಎಂದು ತಿಳಿದುಬಂದಿದೆ.
“ಇಂದಿನ ಆರ್ಆಸ್ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಣೆ”
