ಟಿ.ನರಸೀಪುರ: ಮಾ:26 ನಾಳೆ ಮಂಗಳ ವಾರ ಶ್ರೀ ಮಹಾಲಕ್ಷ್ಮಿ ಸಮೇತ ಗುಂಜಾನರ ಸಿಂಹಸ್ವಾಮಿಯ ಬ್ರಹ್ಮ ರಥೋತ್ಸವ ವಿವಿಧ ಪೂಜಾ ಕೈಂಕಾರ್ಯ ಗಳೊಂದಿಗೆ ಜರಗಲಿದೆ.ಕಾಶಿಗಿಂತಲೂ ಒಂದು ಗುಲಗಂಜಿ ಯಷ್ಟು ಪವಿತ್ರವೆನಿಸಿರುವ ತ್ರಿವೇಣಿ ಸಂಗಮ ಟಿ.ನರಸೀಪುರದಲ್ಲಿ ನಡೆಯಲ್ಲಿದ್ದು ಶ್ರೀ ಗುಂಜ ನರಸಿಂಹ ಸ್ವಾಮಿ ರಥೋತ್ಸವದ ಸಿದ್ದತೆ ಕಾರ್ಯಗಳು ಭರದಿಂದ ಸಾಗಿವೆ.
ಶ್ರೀ ಮಹಾಲಕ್ಷ್ಮಿ ಸಮೇತ ಗುಂಜಾನರಸಿಂಹ ಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ದೀಪಾಲಂಕಾರ, ತೇರಿನ ಸಿದ್ದತೆ, ರಥದ ಗಾಲಿಗೆ ಬಣ್ಣ ಮತ್ತು ಇನ್ನಿತರ ಕಾರ್ಯಗಳು ಭರದಿಂದ ಸಾಗಿದೆ.ಬ್ರಹ್ಮ ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ರಾಜ್ಯದ ನಾನಾ ಭಾಗಗಳಿಂದ ಜೊತೆಗೆ ತಮಿಳುನಾಡು, ಆಂದ್ರಪ್ರದೇಶ ನೆರೆ ರಾಜ್ಯಗಳಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷಂಗಳು 1945 ಕ್ಕೆ ಸಲ್ಲುವ ಶ್ರೀ ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ, ಶಿಶಿರ ಋತು ಮೀನ ಮಾಸ ಕೃಷ್ಣಪಕ್ಷ ಪ್ರತಿಪತ್ ಹಸ್ತ ನಕ್ಷತ್ರದಿಂದ ಕೂಡಿರುವ ಮಂಗಳವಾರದಂದು ಮಧ್ಯಾಹ್ನ 12-45 ರಿಂದ 1-15 ರ ಶುಭ ಮಿಥುನ ಲಗ್ನದಲ್ಲಿ ಸ್ವಾಮಿಯವರ ದಿವ್ಯ ಮಹಾರಥೋತೇಸವವನ್ನು ದಿವ್ಯ ಶ್ರೀ ವೈಖಾನಸಾಗಮರೀತ್ಯಾ ನೆರವೇರಿಸಲು ಭಗವತ್ ಪ್ರೇರಣೆಯಾಗಿದೆ.
ಸೋಮವಾರ ಕಲ್ಯಾಣೋತ್ಸವ, ಗಜೇಂದ್ರ ಪರಿಪಾಲನೋತ್ಸವ, ಮಂಗಳವಾರ ರಥಸ್ಥಂ ಕೇಶವಂ ದೃಷ್ಟ್ವಾ ಪುನರ್ಜನ್ಮವಿದ್ಯತೇ ಎಂಬ ದಿವ್ಯ ಮಹಾರಥೋತ್ಸವ, ಬುಧವಾರ ತಿರುನಾಳ್ ಕಟ್ಟೆ ಉತ್ಸವ, ಡೋಲೋತ್ಸವ, ಶಯನೋತ್ಸವ, ಗುರುವಾರ ಅವಬೃತ ಸ್ನಾನ, ಧ್ವಜ ಅವರೋಹಣ, ಶುಕ್ರವಾರ ಮಹಾಭಿಷೇಕ, ಹನುಮಂತೋತ್ಸವ ಹಾಗೂ ಶನಿವಾರ ವೈ ಮಾಳಿಗೆ ಉತ್ಸವ ನಡೆಯಲಿದೆ.
ಪ್ರಧಾನ ಅರ್ಚಕರಾದ ಸಂಪತ್ ಕುಮಾರ್ ಭಟ್ ಮಾತನಾಡಿ ಗುಂಜಾನರಸಿಂಹ ಸ್ವಾಮಿ ಸ್ವಯಂ ಉದ್ಭವಮೂರ್ತಿ, ನಾಲ್ಕು ಸಾವಿರ ವರ್ಷಗಳ ಹಿಂದೆ ಅಭಯಾರಣ್ಯ ಪ್ರದೇಶ ಈ ಕ್ಷೇತ್ರ.ಅಗಸರಿಗೆ ಮೋಕ್ಷ ಕೊಟ್ಟಂತಹ ಜಾಗ. ಈ ಕ್ಷೇತ್ರ ಮಹಿಮೆ ಮತ್ತು ಸ್ಥಳ ಕಾಶಿಗಿಂತಲೂ ಒಂದು ಗುಲಗಂಜಿಯಷ್ಟು ಪವಿತ್ರವೆನಿಸಿದೆ.
ಬ್ರಹ್ಮರಥೋತ್ಸವವನ್ನು ಕಣ್ತುಂಬಿಕೊಳ್ಳಲು ರಾಜ್ಯ ಹಾಗೂ ಅಂತರರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆಂದರು.
ಶ್ರೀ ಗುಂಜನರಸಿಂಹಸ್ವಾಮಿ ದೇವಾಲ ಯದ ಸಿಬ್ಬಂದಿ ದೀಪು ಮಾತನಾಡಿ ಶ್ರೀ ಗುಂಜನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸ ವವು ವಿಜೃಂಭಣೆಯಿಂದ ಜರಗಲಿದೆ. ಭಕ್ತ ಸಮೂಹ ಶ್ರೀ ಮಹಾಲಕ್ಷ್ಮಿ ಸಮೇತ ಶ್ರೀ ಗುಂಜನರಸಿಂಹಸ್ವಾಮಿ ರಥೋತ್ಸವದಲ್ಲಿ ಭಾಗಿಯಾಗಿ ಭಕ್ತಿ ಭಾವ ಮೆರೆದು ಪುನೀತರಾಗಬೇಕೆಂದು ಮನವಿ ಮಾಡಿದರು.