ದೇವನಹಳ್ಳಿ: ಇತಿಹಾಸ ಪ್ರಸಿದ್ದ ದೇವನಹಳ್ಳಿಯ ಮೌಕ್ತಿಕಾಂಬ ಅಮ್ಮನವರ ಕರಗ ಮಹೋತ್ಸವವು ಅದ್ದೂರಿಯಾಗಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಮೌಕ್ತಿಕಾಂಬ ವಹ್ನಿಕುಲ ಕ್ಷತ್ರೀಯ ತಿಗಳ ಸಂಘದ ಅಧ್ಯಕ್ಷಶಿವನಾಪುರಎಸ್.ಆರ್.ವಿಜಯಕುಮಾರ್.ತಿಳಿಸಿದರು.
ಪಟ್ಟಣದ ಮೌಕ್ತಿಕಾಂಬ ದೇವಾಲಯದ ಆವರಣದಲ್ಲಿ ಕರಗದ ಪ್ರಯುಕ್ತ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಏಪ್ರಿಲ್ 27ರಿಂದ ಮೇ 7ರವರೆಗೆ ವಿಶೇಷ ಪೂಜೆಗಳು ನಡೆಯಲಿವೆ. ಮೇ5ರಂದು ರಾತ್ರಿ 1ಗಂಟೆಗೆ ದೇವಾಲಯದಿಂದ ಕರಗ ಪಟ್ಟಣದ ರಾಜಬೀದಿಗಳಲ್ಲಿ ಸಂಚರಿಸಲಿದೆ. ಮೇ 3ರಂದು ಬೆಳಗಿನ ಜಾವ ಹಸಿಕರಗ ನಡೆಯಲಿದೆ. ಮೇ 4ರಂದು ರಾತ್ರಿ 8ಗಂಟೆಗೆ ಆರತಿ ದೀಪಗಳು ಅಗ್ನಕುಂಡ ನಡೆಯಲಿದೆ. ಮೇ 6ರಂದು ಸಂಜೆ 4ಗಂಟೆಗೆ ವಸಂತೋತ್ಸವ ಮತ್ತು ಧ್ವಜಾವರೋಹಣ ಹಾಗೂ ಮೇ 7ರಂದು ರಾತ್ರಿ 8ಗಂಟೆಗೆ ಪಣಸ್ಥರ ಪೂಜೆ ಮತ್ತು ಮಹಾಮಂಗಳಾರತಿ ನಡೆಯಲಿದೆ.
ಬೆಂಗಳೂರು ಕರಗದ ಮಾದರಿಯಲ್ಲಿಯೇ ದೇವನಹಳ್ಳಿಯ ಕರಗ ನಡೆಸಿಕೊಂಡು ಬರಲಾಗಿದೆ. ಮೌಕ್ತಿಕಾಂಬ ಅಮ್ಮನವರು ದೇವಾಲಯದಲ್ಲಿ ಪುರಾತನ ಕಾಲದಿಂದಲೂ ನೆಲೆಸಿ ಆಶ್ರಿತರ ಸಂಕಷ್ಟಗಳನ್ನು ನಿವಾರಿಸುತ್ತಾ ಮಾತೃಸ್ವರೂಪಳಾಗಿಯೂ, ಶಕ್ತಿಸ್ವರೂಪಿಯಾಗಿಯೂ ಎಲ್ಲರನ್ನು ಸಲಹುತ್ತಿರುವುದು ಮೌಕ್ತಿಕಾಂಬ ಅಮ್ಮನವರಾಗಿದ್ದಾರೆ. ಸಮಯದ ಅಭಾವವಿರುವುದರಿಂದ ಹೊಸ ಜಾಗಗಳಿಗೆ ಕರಗ ಬರಲು ಸಾಧ್ಯವಿಲ್ಲ. ಮತ್ತು ಕಾಲಿಗೆ ನಮಸ್ಕರಿಸುವುದನ್ನು ರದ್ದುಪಡಿಸಿದೆ. ಆದಕಾರಣ ಸಾರ್ವಜನಿಕರು ಸಹಕರಿಸಬೇಕಾಗಿ ಕೋರಿದ್ದಾರೆ ಎಂದು ಹೇಳಿದರು.
ಮೇ 5ರಂದು ಕರಗದ ಪ್ರಯುಕ್ತ ನಗರದಲ್ಲಿ ಏರ್ಪಡಿಸಿರುವ ಗ್ರಾಮ ದೇವತೆಗಳ ಪಲ್ಲಕ್ಕಿ ಉತ್ಸವ ಹಾಗೂ ಅನ್ನಸಂತರ್ಪಣೆ ಮಾಡಲಾಗುವುದು. ಹಬ್ಬದ ವಾತಾವರಣದಲ್ಲಿ ಕರಗಮಹೋತ್ಸವವನ್ನು ಮಾಡ ಲಾಗುತ್ತಿದೆ. ಕರಗವನ್ನು ಪೂಜಾರಿ ರವಿಕುಮಾರ್ ಹೊರಲಿದ್ದಾರೆ.8ನೂರಕ್ಕೂ ಹೆಚ್ಚು ವೀರಗಾರರು ಭಾಗವಹಿಸಲಿದ್ದಾರೆ. ಎಂದು ಹೇಳಿದರು.
ಈ ವೇಳೆಯಲ್ಲಿ ಕರಗದ ಪೂಜಾರಿ ರವಿಕುಮಾರ್, ಮೌಕ್ತಿಕಾಂಬ ವಹ್ನಿಕುಲ ಕ್ಷತ್ರೀಯ ತಿಗಳ ಸಂಘದ ಗೌರವಾಧ್ಯಕ್ಷ ಚನ್ನರಾಯಪ್ಪ, ಕಾರ್ಯದರ್ಶಿ ಕೃಷ್ಣಪ್ಪ, ಮುಖಂಡರಾದ ಗಜೇಂದ್ರ, ರಮೇಶ್, ಕೃಷ್ಣಪ್ಪ, ನಾರಾಯಣಸ್ವಾಮಿ, ಮತ್ತಿತರರು ಇದ್ದರು.
Leave a Review