ಬೆಂಗಳೂರು: ರಾಜ್ಯಪಾಲರ ಈ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ಹರಿಪ್ರಸಾದ್ ಮತ್ತು ಇತರ ಕಾಂಗ್ರೆಸ್ ನಾಯಕರು, ಅವರನ್ನು ತಡೆಯಲು ಪ್ರಯತ್ನಿಸಿದರು, ಆದರೆ ರಾಜ್ಯಪಾಲರು ಅದಕ್ಕೆ ಸ್ಪಂದಿಸದೆ ನಿರ್ಗಮಿಸಿದರು.
ರಾಜ್ಯಪಾಲರನ್ನು ತಡೆಯುವಾಗ ಬಿ.ಕೆ ಹರಿಪ್ರಸಾದ್ ಬಟ್ಟೆ ಹರಿದಿದ್ದು, ಭಾರಿ ಹೈಡ್ರಾಮಾಗೆ ಕಾರಣವಾಯಿತು. ರಾಜ್ಯಪಾಲರನ್ನು ಅಡ್ಡಗಟ್ಟುವ ವೇಳೆ ಬಿ.ಕೆ ಹರಿಪ್ರಸಾದ್ ಅವರ ಶರ್ಟ್ ಕೂಡ ಹರಿದಿದೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಹರಿಪ್ರಸಾದ್, ಬಿಜೆಪಿಯವರೇ ನನ್ನ ಬಟ್ಟೆ ಹರಿದಿದ್ದಾರೆ ಎಂದು ಆರೋಪಿಸಿದ್ದಾರೆ.
ಹರಿದ ಹರಿಪ್ರಸಾದ್ ಕುರ್ತಾ



