ರಾಮನಗರ: ಜಗತ್ತಿನ ಆಟೋ ಮೊಬೈಲ್ ಕ್ಷೇತ್ರದಲ್ಲಿ ದಿಗ್ಗಜ ಸಂಸ್ಥೆಯಾದ ಟಯೋಟ ಮೋ ಟಾರ್ಸ್ ಕಾರ್ಪೋರೇಷನ್ ಜಪಾನ್ನ ಮಾನವ ಸಂಪನ್ಮೂಲ ಅಧಿಕಾರಿಗಳ ನಿಯೋಗ ಭಾರತದಲ್ಲಿ ಐ.ಟಿ.ಐ ತರಬೇತಿಯ ಗುಣ ಮಟ್ಟವನ್ನು ವೀಕ್ಷಿಸಲು ಚನ್ನಪಟ್ಟಣ ತಾಲ್ಲೂಕಿನ ವಂದಾರಗುಪ್ಪೆಯ ಶ್ರೀ ಹೊಂಬೇಗೌಡ ಐ.ಟಿ.ಐ ಕಾಲೇಜಿಗೆ ಭೇಟಿ ನೀಡಿದರು.
ಅಧಿಕಾರಿಗಳು ಸಂಸ್ಥೆಯ ಎಲ್ಲಾ ವಿಭಾಗಗಳನ್ನು ವೀಕ್ಷಿಸಿ ತರಬೇತಿಯ ಗುಣಮಟ್ಟ, ಕಾರ್ಯ ಚಟುವಟಿಕೆಗಳು ಹಾಗೂ ಕಲಿಕಾ ಪರಿಸರದ ಬಗ್ಗೆ ನಿಯೋಗದ ಮುಖ್ಯಸ್ಥರಾದ ಮಿಜುತ ಸ್ಯಾನ್ ರವರು ಮೆಚ್ಚುಗೆ ವ್ಯಕ್ತ ಪಡಿಸಿದರು.ಇದೇ ವೇಳೆ ಮಾತನಾಡಿದ ಅವರು ಭಾರತಿಯ ಮಾನವ ಸಂಪನ್ಮೂಲ ಹಾಗೂ ಯುವ ತರಬೇತಿದಾರರು ಕೇವಲ ಭಾರತಕ್ಕೆ ಸೀಮಿತವಾಗದೆ ಜಪಾನ್ನ ಟಯೋಟ ದೊಂದಿಗೆ ಕೈ ಜೋಡಿಸಿದರೆ ಎಲ್ಲಾ ರೀತಿಯ ಸಹಕಾರ ನೀಡಲು ಜಪಾನ್ ದೇಶ ಕಾತುರವಾಗಿದೆ ಎಂದರು.
ಒಳ್ಳೆಯ ಗುಣ ಮಟ್ಟದ ವಾಹನ ಸೌಲಭ್ಯಗಳು ಸಮಾಜಕ್ಕೆ ತಲುಪಬೇಕು ಅದಕ್ಕಾಗಿ ಐ.ಟಿ.ಐ ಕಾಲೇಜುಗಳು ಗುಣಮಟ್ಟದ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಬೇಂದರು.
ಶ್ರೀ ಹೊಂಬೇಗೌಡ ಶಿಕ್ಷಣ ಸಂಸ್ಥೆಯ ದಾನಿಗಳು ಹಾಗೂ ಕಾರ್ಯದರ್ಶಿಗಳಾದ ಆರ್ ಮಹೇಶ್ ಚಂದ್ರ ಮಾತನಾಡಿ ಶ್ರೀ ಹೊಂಬೇಗೌಡ ಕೈಗಾರಿಕಾ ತರಬೇತಿ ಕೇಂದ್ರವು 1984 ರಲ್ಲಿ ಪ್ರಾರಂಭವಾಗಿ ಕಳೆದ 40 ವರ್ಷಗಳಿಂದ ವಿಶೇಷವಾಗಿ ಗ್ರಾಮೀಣ ಹಾಗೂ ಬಡ ಮಕ್ಕಳಿಗೆ ತರಬೇತಿಗೆ ಅವಶ್ಯಕವಿರುವ ಆಧುನಿಕ ಯಂತ್ರೋಪಕರಣಗಳು, ವಿಶಾಲವಾದ ವರ್ಕ್ ಶಾಫ್ಗಳು, ಕಂಪ್ಯೂಟರ್ ಲ್ಯಾಬ್, ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ. ತರಬೇತಿಗೆ ಉತ್ತಮ ಪರಿಸರದ ಮೂಲಕ ನುರಿತ ಹಾಗೂ ಅನುಭವಿ ಅಧ್ಯಾಪಕರಿಂದ ಉತ್ತಮ ಗುಣ ಮಟ್ಟದ ತರಬೇತಿಯನ್ನು ನೀಡುತ್ತಾ ಬಂದಿರುತ್ತದೆ. ನಮ್ಮ ತರಬೇತಿ ಕೇಂದ್ರದಿಂದ ಸಾವಿರಾರು ವಿದ್ಯಾರ್ಥಿಗಳು ತರಬೇತಿ ಪಡೆದು ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆದಿರುತ್ತಾರೆ ಹಾಗೂ ಉನ್ನತ ವ್ಯಾಸಂಗವನ್ನು ಪಡೆಯುತ್ತಿದ್ದಾರೆ ಎಂದರು.ನಮ್ಮ ಸಂಸ್ಥೆಯು ಟಯೋಟ ಕಿರ್ಲೋಸ್ಕರ್ ಮೋಟಾರ್ಸ್ ಬಿಡದಿ ಜೊತೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡಲು ಎಫ್.ಎಸ್.ಟಿ ಗೆ ಒಪ್ಪಂ ದ ಮಾಡಿಕೊಳ್ಳಲಾಗಿದೆ. ಫಿಟ್ಟರ್ ವಿಭಾಗದಲ್ಲಿ ತರಬೇತಿ ಪಡೆದ ಅರ್ಜುನ್ ಕುಮಾರ್ ಎಂಬ ವಿದ್ಯಾರ್ಥಿಯು ಜಿ.ಎಸ್.ಟಿ ತರಬೇತಿಯನ್ನು ಜಪಾನ್ನಲ್ಲಿ ಪಡೆಯುತ್ತಿರುವುದು ಹಾಗೂ ಟಯೋಟ ಮೋಟಾರ್ಸ್ ಕಾಪೆರ್Çೀರೇಷನ್ ಜಪಾನ್ ನಿಯೋಗ ನಮ್ಮ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡು ಭೇಟಿ ನೀಡಿರುವುದು ಅತ್ಯಂತ ಹರ್ಷದಾಯಕ ಎಂದರು. ಜಪಾನ್ ತಂಡದ ನಿಯೋಗದಲ್ಲಿ ಯಕೋತಸ್ಯಾನ್, ಹತಾನಕ, ಮತ್ತುಯು ಹಾಗೂ ಟಯೋಟ ಬಿಡದಿ ಮಾನವ ಸಂಪನ್ಮೂಲ ತಂಡದ ಸಯೋಜಿಮ, ಮಹೇಶ್ ಕಿಣಿ ಹಾಗೂ ದಯಾನಂದನ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಟ್ರಸ್ಟಿಗಳಾದ ಸತ್ಯವತಿ. ಆಡಳಿತ ಮಂಡಳಿ ಸದಸ್ಯರಾದ ರುದ್ರಪ್ಪನವರು, ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಡಿ.ಪಿ.ಶಂಕರಲಿಂಗೇಗೌಡ ಹಾಗು ಎಲ್ಲಾ ಬೋಧಕ ಹಾಗೂ ಬೋದಕೇತರ ವರ್ಗದವರು ಉಪಸ್ಥಿತರಿದ್ದರು.