ಹುಬ್ಬಳ್ಳಿ: ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸುವ ಸಲುವಾಗಿ ನೈಋತ್ಯ ರೈಲ್ವೆಯು ವಿಶೇಷ ರೈಲು ಸೇವೆಗಳನ್ನು ಓಡಿಸಲು ನಿರ್ಧರಿಸಿದೆ. ಈ ವಿಶೇಷ ರೈಲುಗಳ ವಿವರಗಳು ಹೀಗಿವೆ:೧. ರೈಲು ಸಂಖ್ಯೆ ೦೭೩೫೩/೦೭೩೫೪ ಎಸ್ಎಸ್ಎಸ್ ಹುಬ್ಬಳ್ಳಿಮಂಗಳೂರು ಜAಕ್ಷನ್ಯಶವAತಪುರ ವಿಶೇಷ ಎಕ್ಸ್ ಪ್ರೆಸ್ (೧ ಟ್ರಿಪ್): ರೈಲು ಸಂಖ್ಯೆ ೦೭೩೫೩ ಎಸ್ಎಸ್ಎಸ್ ಹುಬ್ಬಳ್ಳಿಮಂಗಳೂರು ಜಂಕ್ಷನ್ ವಿಶೇಷ ಎಕ್ಸ್ ಪ್ರೆಸ್ ರೈಲು ಅಕ್ಟೋಬರ್ ೧೭, ೨೦೨೫ ರಂದು ೧೬:೦೦ ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಟು, ಮರುದಿನ ಅಕ್ಟೋಬರ್ ೧೮, ೨೦೨೫ ರಂದು ೧೧:೧೫ ಗಂಟೆಗೆ ಮAಗಳೂರು ಜಂಕ್ಷನ್ ತಲುಪಲಿದೆ.
ಈ ರೈಲು ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಯಶವಂತಪುರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಮತ್ತು ಬಂಟವಾಳ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ರೈಲು ಸಂಖ್ಯೆ ೦೭೩೫೪ ಮಂಗಳೂರು ಜAಕ್ಷನ್ಯಶವAತಪುರ ವಿಶೇಷ ಎಕ್ಸ್ ಪ್ರೆಸ್ ರೈಲು ಅಕ್ಟೋಬರ್ ೧೮, ೨೦೨೫ ರಂದು ೧೪:೩೫ ಗಂಟೆಗೆ ಮಂಗಳೂರು ಜAಕ್ಷನ್ನಿAದ ಹೊರಟು, ಅದೇ ದಿನ ರಾತ್ರಿ ೨೩:೧೫ ಗಂಟೆಗೆ ಯಶವಂತಪುರ ತಲುಪಲಿದೆ.
ಈ ರೈಲು ಬಂಟವಾಳ, ಕಬಕಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ ಮತ್ತು ಕುಣಿಗಲ್ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ೨. ರೈಲು ಸಂಖ್ಯೆ ೦೬೨೨೯/೦೬೨೩೦ ಯಶವಂತಪುರ-ಮAಗಳೂರು ಜಂಕ್ಷನ್- ಬೆAಗಳೂರು ಕಂಟೋನ್ಮೆAಟ್ ವಿಶೇಷ ಎಕ್ಸ್
ಪ್ರೆಸ್ (೧ ಟ್ರಿಪ್): ರೈಲು ಸಂಖ್ಯೆ ೦೬೨೨೯ ಯಶವಂತಪುರ- ಮAಗಳೂರು ಜಂಕ್ಷನ್ ವಿಶೇಷ ಎಕ್ಸ್ ಪ್ರೆಸ್ ಅಕ್ಟೋಬರ್ ೧೯, ೨೦೨೫ ರಂದು ೦೦:೧೫
ಗಂಟೆಗೆ ಯಶವಂತಪುರದಿAದ ಹೊರಟು, ಅದೇ ದಿನ ೧೧:೧೫ ಗಂಟೆಗೆ ಮಂಗಳೂರು ಜAಕ್ಷನ್ ತಲುಪಲಿದೆ. ಈ ರೈಲು ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು ಮತ್ತು ಬಂಟವಾಳ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.
ರೈಲು ಸಂಖ್ಯೆ ೦೬೨೩೦ ಮಂಗಳೂರು ಜಂಕ್ಷನ್-ಬೆAಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸಪ್ರೆಸ್ ರೈಲು ಅಕ್ಟೋಬರ್ ೧೯, ೨೦೨೫ ರಂದು ೧೪:೩೫ ಗಂಟೆಗೆ ಮಂಗ ಳೂರು ಜಂಕ್ಷನ್ನಿAದ ಹೊರಟು, ಮರುದಿನ ೦೦:೩೦ ಗಂಟೆಗೆ ಬೆಂಗಳೂರು ಕಂಟೋನ್ಮೆAಟ್ ತಲುಪಲಿದೆ.