ದೇವನಹಳ್ಳಿ: ಕೇಂದ್ರ ಸರ್ಕಾರದ ರಾಷ್ಟ್ರೀಯ ಜಲಜೀವನ ಮಿಷನ್ ಯೋಜನೆಯಡಿ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಪ್ರತಿ ಮನೆಗಳಿಗೆ ನೀರು ತಲುಪಿಸುವ ಉದ್ದೇಶದಿಂದ ನೀರು ಸರಬರಾಜು ದಾರರಿಗೆ, ಕೊಳಾಯಿ ನಿರ್ವಹಣೆ ಮಾಡುವವರಿಗೆ 2ದಿನಗಳ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಸಿ.ಎಸ್.ಶ್ರೀನಾಥ್ಗೌಡ ತಿಳಿಸಿದರು.
ಅವರು ತಾ.ಪಂ. ಸಭಾಭವನದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ್ ಬೆಂಗಳೂರು ಗ್ರಾಮಾಂತರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ. “ರಾಷ್ಟ್ರೀಯ ಜಲಜೀವನ ಮಿಷನ್ ಯೋಜನೆಯಡಿ” ಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ,
ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ ರಾಷ್ಠ್ರೀಯ ಜಲ ಜೀವನ್ ಮಿಷನ್ (JJM) 2024 ರ ಅಂತ್ಯದ ವೇಳೆಗೆ ಗ್ರಾಮೀಣ ಭಾರತದ ಎಲ್ಲಾ ಮನೆಗಳಿಗೆ ವೈಯಕ್ತಿಕ ಕ್ರಿಯಾತ್ಮಕ ಮನೆಯ ಟ್ಯಾಪ್ ಸಂಪರ್ಕಗಳ (FHTCs) ಮೂಲಕ ಸುರಕ್ಷಿತ ಮತ್ತು ಸಾಕಷ್ಟು ಕುಡಿಯುವ ನೀರನ್ನು ಒದಗಿಸುವ ಉದ್ದೇಶ ಹೊಂದಿದ್ದು, ಮಿಷನ್ನ ಪ್ರಮುಖ ಅಂಶವಾಗಿ ವ್ಯಾಪಕವಾದ ಮಾಹಿತಿ, ಶಿಕ್ಷಣ ಮತ್ತು ಸಂವಹನವನ್ನು ಒಳಗೊಂಡಿರುತ್ತದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ನೀರುಸರಬರಾಜುದಾರರು ಹಾಗೂ ಕೊಳಾಯಿ ಅಳವಡಿಕೆ ಮಾಡುವವರ (Plumber) ಜವಾಬ್ದಾರಿಗಳು, ಕಾಮಗಾರಿಗಳ ದುರಸ್ತಿ ಮತ್ತು ನಿರ್ವಹಣೆ ಕುರಿತು ಎರಡು ದಿನ ತರಬೇತಿ ಕಾರ್ಯಕ್ರಮ ನಡೆಸಲಾಯಿತು ಎಂದರು.
ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜಲಜೀವನ್ ಮಿಷನ್ ಕಾಮಗಾರಿಗಳ ಉತ್ತಮವಾಗಿ ಕಾರ್ಯಗತಗೊಳಿಸ ಲಾಗುತ್ತಿದ್ದು ಇದರ ಕಾರ್ಯಚರಣೆ, ಸುಸ್ಥಿರತೆ ಸಂಪೂರ್ಣ ನಿರ್ವಹಣೆ ಮಾಡುವ ಹಾಗೂ ಉತ್ತಮವಾಗಿ ಅನುಷ್ಠಾನಗೊಳಿಸಲು ನೀರು ಸರಬರಾಜುದಾರರು / ಕೊಳಾಯಿ ಅಳವಡಿಕೆದಾರರುಗಳ ಜವಾಬ್ದಾರಿಗಳ ಬಗ್ಗೆ ಸಂಪೂರ್ಣ ಮಾಹಿತಿ ತರಬೇತಿಯಲ್ಲಿ ನೀಡಲಾಯಿತು.
ಸದರಿ ಸಭೆಯಲ್ಲಿ ಸಹಾಯಕ ಕಾರ್ಯಪಾಲಕ ಭರತ್ಕುಮಾರ್, ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಲೋಕಲ್ ಸೆಲ್ಫ್ ಗವರ್ನಮೆಂಟ್ ಬೆಂಗಳೂರುಸಂಸ್ಥೆಯ ರೀಜನಲ್ ನಿರ್ದೇಶಕ ರವಿಕುಮಾರ್, ರಾಜ್ಯಸಂಪನ್ಮೂಲ ವ್ಯಕ್ತಿ ಜೋಸೆಫ್, ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ನಾಗಪ್ಪ ಹಾಗೂ ರಾಜಣ್ಣ ಜಿಲ್ಲಾ ಪ್ರಯೋಗಾಲಯದ ಸಿಬ್ಬಂದಿಗಳು, ಸ್ವಚ್ಛ ಭಾರತ ಮಿಷನ್ ಯೋಜನೆಯ ಸಮಾಲೋಚಕರು ಹಾಗೂ 24 ಗ್ರಾಪಂಗಳ ನೀರು ಸರಬರಾಜುದಾರರು/ಜಲಗಾರರು ಭಾಗವಹಿಸಿದ್ದರು.