ಶಿಡ್ಲಘಟ್ಟ: ಕಾರ್ಯಾಂಗ ಸ್ಥಿರತೆ ಯಾಗಿರಬೇಕು. ಆಗ ಅಧಿಕಾರಿಗಳು ಮತ್ತು ನೌಕರರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿಸಲು ಸಾಧ್ಯ. ಆದರೆ, ತದ್ವಿರುದ್ಧ ಪರಿಸ್ಥಿತಿ ಇರುವ ತಾಲ್ಲೂಕಿನಲ್ಲಿ ಅಧಿಕಾರಿಗಳ ವರ್ಗಾವಣೆ ಅನಿಯಮಿತವಾಗಿ ಮುಂದುವರೆದಿದ್ದು, ನಗರಸಭೆ ಆಯುಕ್ತರಾಗಿ ಮಂಜುನಾಥ್ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಎಸ್.ನಾರಾಯಣ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಶ್ರೀ ಮಂಜುನಾಥ ಅವರು ಈ ಹಿಂದೆ ಇದೇ ಶಿಡ್ಲಘಟ್ಟ ನಗರಸಭೆಯಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದರು. ಆ ಸಮಯದಲ್ಲಿ, ನಂತರ ಹಲವಾರು ಕರ್ತವ್ಯಲೋಪ ಗಳು ಕೇಳಿಬಂದವು. ತಾಲ್ಲೂಕು ಪಂಚಾಯಿತಿ ಸ್ಥಿತಿಯೂ ಭಿನ್ನವಲ್ಲ.
ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರಿಗಳ , ಸಿಬ್ಬಂದಿ ಕೊರತೆ, ಮೂಲಸೌಕರ್ಯ, ಅಭಿವೃದ್ಧಿ , ನರೇಗಾ ಯೋಜನೆ ದುರುಪಯೋಗ ಇತ್ಯಾದಿಗಳಿಂದ ಸಾಮರ್ಥ್ಯವೇ ಕದಡಿಹೋಗಿದೆ. ಅಭಿವೃದ್ಧಿ ಅಧಿಕಾರಿಗಳ ಕೊರತೆ, ಸೆಕ್ರೆಟರಿಗಳ ಕೊರತೆ ಇದ್ದು,ಒಬ್ಬ ಅಧಿಕಾರಿ ಮೂರು ನಾಲ್ಕು ಪಂಚಾಯಿತಿ ನೋಡಿಕೊಳ್ಳುವ ಜವಾಬ್ದಾರಿ.
ಇವೆಲ್ಲವನ್ನೂ ನೂತನ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಿರ್ವಹಣೆ ಮಾಡುವಂತಾಗಬೇಕು.ಸರ್ಕಾರ ಹಾಗೂ ಸ್ಥಳೀಯ ಶಾಸಕರಿಗೆ ಗೌರವ ತೋರುವಂತಾಗಬೇಕಿತ್ತು ಸಾರ್ವಜನಿಕರು ಆಶಿಸಿದ್ದಾರೆ.