ಬೆಂಗಳೂರು: ರಾಜ್ಯದಲ್ಲಿ ಶೀಘ್ರವೇ ಸಾರಿಗೆ ಬಸ್ ಪ್ರಯಾಣ ದರ ಏರಿಕೆಯಾಗುವ ಸಾಧ್ಯತೆ ಇದೆ. ಶಕ್ತಿ ಯೋಜನೆ ಬಳಿಕ ನಿಗಮ ನಿರ್ವಹಣೆಗೆ ಸಂಸ್ಥೆಗಳು ಸರ್ಕಸ್ ಮಾಡುತ್ತಿವೆ. ಹೀಗಾಗಿ ಶೀಘ್ರವೇ 10 ರಿಂದ 15%ನಷ್ಟು ದರ ಏರಿಕೆ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಾಲ್ಕೂ ಸಾರಿಗೆ ನಿಗಮಗಳು ಮುಂದಾಗಿವೆ. ಸರ್ಕಾರ ಒಪ್ಪಿದರೆ ಶೀಘ್ರವೇ ಸಾರಿಗೆ ಬಸ್ ಗಳ ಪ್ರಯಾಣ ದರ ಏರಿಕೆಯಾಗಲಿದೆ ಅಂತಾ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮಾಹಿತಿ ನೀಡಿದ್ದಾರೆ.
ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿ, ಡಿಸೇಲ್ ಸೇರಿದಂತೆ ಬಸ್ ಗಳ ಬಿಡಿ ಭಾಗಗಳ ದರ ಬಹಳ ಏರಿದೆ.
2020ರ ನಂತರ ರಾಜ್ಯದಲ್ಲಿ ಸಾರಿಗೆ ಬಸ್ ದರ ಏರಿಕೆಯಾಗಿಲ್ಲ,ಸದ್ಯ ನಿಗಮಗಳಿಂದ ಯಾವುದೇ ಪ್ರಸ್ತಾವನೆ ನನಗೆ ಬಂದಿಲ್ಲ. ನಿಗಮಗಳು ಪ್ರಸ್ತಾವನೆ ಕೊಟ್ಟರೆ ಸಿಎಂ ಗಮನಕ್ಕೆ ತಂದು ಚರ್ಚೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.