ದೊಡ್ಡಬಳ್ಳಾಪುರ: ಭಾರಿ ಬಿರುಗಾಳಿ ಮಳೆಗೆ ಬುಧವಾರ ರಾತ್ರಿ ತಾಲ್ಲೂಕಿನ ಹಲವಾರು ಕಡೆಗಳಲ್ಲಿ ಮರಗಳು ಬಿದ್ದು ರಸ್ತೆ ಸಂಚಾರ ಅಸ್ತವ್ಯ ಸ್ತವಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿರುವುದರಿಂದ ವಿದ್ಯುತ್ ಕಡಿತವಾಗಿದತ್ತು.ದೊಡ್ಡಬಳ್ಳಾಪುರದಲ್ಲಿ ಬುಧವಾರ ರಾತ್ರಿ 7 ಗಂಟೆ ಸಮಯದಲ್ಲಿ ಸುರಿದ ಭಾರಿ ನಗರದ ಜಾಲಪ್ಪ ಕಾಲೇಜು ರಸ್ತೆಯ ಮುತ್ಯಾಲಮ್ಮ ದೇವಾಲಯ ಸಮೀಪ ಮರ ಮುರಿದು ರಸ್ತೆಗೆ ಆಡ್ಡಲಾಗಿ ಬಿದ್ದಿತ್ತು. ಕೋರ್ಟ್ ರಸ್ತೆ, ಪದವಿ ಕಾಲೇಜು ರಸ್ತೆ, ನಗರಸಭೆ ಕಚೇರಿ ರಸ್ತೆಯಲ್ಲಿ ಮರ ಮುರಿದು ಬಿದ್ದರಿಂದ ಸಂಚಾರಕ್ಕೆ ಅಡ್ಡಿಯಾಗಿತ್ತು. ನಗರದ ಬಾಲಾಜಿ ಲೇಔಟ್ ನಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.ಸತತ ಬಿಸಿಲಿನಿಂದ ಕಂಗೆಟ್ಟಿದ್ದ ಜನರು: ಹಿಂದೂಪುರ ಬೆಂಗಳೂರುವ ರಾಜ್ಯ ಹೆದ್ದಾರಿಯಲ್ಲೂ ಬಿರುಗಾಳಿ ಮಳೆಗೆ ಭಯಭೀತರಾಗಿರುವ ವಾಹನಗಳ ಸವಾರರು ಮರಗಳು ಇಲ್ಲದ ಕಡೆಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಿದ್ದು ಕಂಡಬಂತು.ಮೊಗದಲ್ಲಿ ಬುಧವಾರವೂ ಸುರಿದ ಮಳೆ ಜನರಲ್ಲಿ ಮಂದಹಾಸ ಮೂಡಿಸಿದೆ. ಉರಿ ಬಿಸಿಲಿಗೆ ಕಾದಿದ್ದ ಇಳೆ ತಂಪಾಗಿದೆ.ತಾಲ್ಲೂಕಿನಲ್ಲಿ ಎರಡನೇ ದಿನವಾದ ಬುಧವಾರ ರಾತ್ರಿ 7 ಗಂಟೆ ಸುಮಾರಿಗೆ ಪ್ರಾರಂಭವಾದ ಪೂರ್ವ ಮುಂಗಾರು ಮಳೆ ಒಂದು ಗಂಟೆಗೂ ಹೆಚ್ಚು ಸಮಯ ಸುರಿಯಿತು.ಮಂಗಳವಾರದಂದು ಸಂಜೆ ಬಿದ್ದ ಮಳೆಗಿಂತಲೂ ಬುಧವಾರ ಸಂಜೆ ಗುಡುಗು ಸಹಿತ ಭಾರಿ ಮಳೆ, ವೇಗವಾಗಿ ಗಾಳಿ ಬೀಸಿದ್ದರಿಂದ ವಿದ್ಯುತ್ ಕಡಿತವಾಗಿತ್ತು, ತಾಲ್ಲೂಕಿನಲ್ಲಿ ಪೂರ್ವ ಮುಂಗಾರಿನ ಮೊದಲ ಮಳೆ ಮಂಗಳವಾರ ಸಂಜೆ ಸುರಿದಿದೆ. ಸುಮಾರು 30 ನಿಮಿಷಗಳ ಕಾಲ ಗುಡುಗು ಸಹಿತ ಬಿದ್ದ ಮಳೆಯಲ್ಲಿ ಅಲ್ಲಲ್ಲಿ ಅಲಿ ಕಲ್ಲುಗಳು ಬಿದ್ದಿವೆ.ತಾಲ್ಲೂಕಿನಲ್ಲಿ 2025ರ ನಂವೆAಬರ್ ಎರಡನೇ ವಾರದಲ್ಲಿ ಹಿಂಗಾರಿನ ಕೊನೆಯ ಮಳೆ ಬಿದ್ದಿತ್ತು,ಯುಗಾದಿ ಹಬ್ಬದ ಎರಡು ದಿನ ಇರುವಂತೆಯೇ ಬಂದ ಮಳೆಯಿಂದ ರೈತರಲ್ಲಿ ಸಂತಸ ಮೂಡಿದೆ. ಯುಗಾದಿ ಹಬ್ಬ ನಂತರ ಮಾರ್ಚ್ 31ರಂದು ಹುಟ್ಟುವ ರೇವತಿ ಮಳೆಯ ಬೀಳಲು ಪ್ರಾರಂಭವಾದರೆ ಉತ್ತಮ ಮುಂಗಾರಿನ ನಿರೀಕ್ಷೆ ಇರಲಿದೆ ಎನ್ನುವ ನಂಬಿಕೆ ರೈತರದ್ದು.



