ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ವಾಸವಾಗಿರುವ ಬುಡಕಟ್ಟು ಜನಾಂಗದ ಕಲಾವಿದರ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿದ ವಿಶ್ವ ಕನ್ನಡ ಹಬ್ಬದ ತಂಡ ಅಲ್ಲಿರುವ ಕಲಾವಿದರ ಕಲೆಯನ್ನು ನೇರವಾಗಿ ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷ ಶಿವಕುಮಾರ್ ನಾಗರ ನವಿಲೆಯವರು, ಈ ವಿಶೇಷ ಕಲಾವಿದರಿಗೆ ನಾವು ಸಿಂಗಪುರದ 2ನೇ ವಿಶ್ವ ಕನ್ನಡ ಹಬ್ಬಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದ್ದು, ಇವರಿಗೆ ಅಂತಾರಾಷ್ಟ್ರೀಯ ಮಟ್ಟದ ವೇದಿಕೆ ನೀಡುವ ಮೂಲಕ ಇನ್ನಷ್ಟು ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದ್ದು, ಈ ದಿನ ಇವರೆಲ್ಲ ಕಲೆಯನ್ನು ಕಣ್ಣಾರೆ ವೀಕ್ಷಿಸಿದ್ದೇವೆ.
ತುಂಬಾ ಸುಂದರವಾದ ಕಲೆಗೆ, ಕಲೆಗಾರರಿಗೆ ನಮನಗಳು. ಕಲಾತಂಡದ ಜೂಲಿಯಾನ ಪೆದ್ರು ಫರ್ನಾಂಡಿಸ್ ಸಿದ್ದಿ, ಮೇರಿ ಬೌತಿಸ್ ಗರಿ ಬಾಚೇ ಸಿದ್ದಿ, ಸೋಬೀನಾ ಮೋತೆಶ್ ಕಾಮ್ರೇಕರ್ ಸಿದ್ಧಿ, ಅನ್ನಾ ಲುಕಾಸ್ ಕಾಂಬ್ರೆಕರ್ ಸಿದ್ದಿ, ಅರ್ಚನಾ ಅಂತೋನ್ ಡುಮಗ್ಗೆಕರ ಸಿದ್ಧಿ, ಮಾಗ್ದಲಿನ್ ಫ್ರಾನ್ಸಿಸ್ ಸಿದ್ದಿ,
ವಸಂತಿ ಸಂತಾನ್ ಗೋಧಳಕರ ಸಿದ್ದಿ, ಸಂಧ್ಯಾ ಸಂತೋಷ್ ಸಿದ್ಧಿ ಎಂಬ ಕಲಾವಿದರು ವಿಶ್ವ ಕನ್ನಡ ಹಬ್ಬದಲ್ಲಿ ತಮ್ಮ ಕಲೆಯನ್ನು ಪ್ರದರ್ಶನ ಮಾಡಲಿದ್ದು, ಆಯ್ಕೆಯಾದ ಕಲಾವಿದರಿಗೆ ಅಭಿನಂದನೆಗಳು ಎಂದರು.ಈ ಸಂದರ್ಭದಲ್ಲಿ ನಟಿ ರೂಪಿಕಾ, ಗುಣವಂತ ಮಂಜು, ಹರ್ಷ ಅಶೋಕ್ ನಿಲಾಪಂತ ಸೇರಿದಂತೆ ಹಲವರು ಉಪಸ್ಥಿತರಿದ್ದರು.