ಬೆಂಗಳೂರು : ರಾಮನಗರದ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕವಣಾಪುರ ಬಸವೇಶ್ವರ ಸ್ವಾಮಿ ವರ್ಧಂತಿ ಮಹೋತ್ಸವದ ಸಂದರ್ಭದಲ್ಲಿ ಉದ್ಯಮಿ ಸುನಿತಾ ತಿಮ್ಮೇಗೌಡ ಅವರಿಗೆ ದೇವಸ್ಥಾನದ ವತಿಯಿಂದ ವಿಶೇಷ ಸನ್ಮಾನ ನಡೆಯಿತು. ಕೊಡುಗೈ ದಾನಿಗಳು ಹಾಗೂ ದೈವಭಕ್ತರಾಗಿರುವ ಸುನಿತಾ ಅವರ ಸಮಾಜಸೇವಾ ಕಾರ್ಯಗಳನ್ನು ಟ್ರಸ್ಟ್ನ ಸದಸ್ಯರು ಪ್ರಶಂಸಿದರು.
ಜೆಮಿನಿ ಮತ್ತು ಜಂಬೋ ಸರ್ಕಸ್ ಮಾಲೀಕರಾಗಿರುವ ಟಿ. ಸುನಿತಾ ಹಾಗೂ ಅಶೋಕ್ ಶಂಕರ್ ಅವರು ಹಲವಾರು ದೇಗುಲಗಳಿಗೆ ಧನ ಸಹಾಯ ನೀಡುತ್ತಿದ್ದಾರೆ. ಈ ಮೂಲಕ ಅವರು ಭಾರತೀಯ ಧಾರ್ಮಿಕ ಪರಂಪರೆಯನ್ನುಪೋಷಿಸುತ್ತಿದ್ದಾರೆ. ಅವರ ಈ ಎಲ್ಲ ಸೇವೆಗಳನ್ನು ಪರಿಗಣಿಸಿ ಕವಣಾಪುರ ಕ್ಷೇತ್ರದಿಂದ ಸನ್ಮಾನ ಮಾಡಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ಮಾತನಾಡಿದ ಸುನಿತಾ, ಕವಣಾಪುರದ ಬಸವೇಶ್ವರ ಪುಣ್ಯಕ್ಷೇತ್ರವು ಈ ನಾಡಿನ ಅತ್ಯಂತ ಸುಂದರ ಹಾಗೂ ರಮಣೀಯ ಧಾರ್ಮಿಕ ಕ್ಷೇತ್ರವಾಗಿದೆ. ಇಲ್ಲಿನ ಬಸವಣ್ಣನೂ ಮಹಾಮಹಿರಾಗಿದ್ದಾರೆ. ಇಲ್ಲಿನ ದೇಗುಲದ ನಿರ್ಮಾಣ ಕಾರ್ಯಕ ಬಹುತೇಕ ಪೂರ್ಣಗೊಂಡಿದೆ. ಸುತ್ತಮುತ್ತಲಿನ ಭಕ್ತರು ಇಲ್ಲಿಗೆ ಭೇಟಿ ನೀಡುವ ಮೂಲಕ ದೇಗುಲದ ಕೆಲಸವನ್ನು ಮುಗಿಸಲು ತಮ್ಮ ನೆರವು ನೀಡಬೇಕು ಎಂದು ಕೋರಿಕೊಂಡರು.
ಸುನೀತಾ ಅವರು ಕವಣಾಪುರ ಕ್ಷೇತ್ರದ ಭಕ್ತರಾಗಿದ್ದು, ಇಲ್ಲಿನ ದೇವರ ಮಹಿಮೆಯ ಬಗ್ಗೆ ಅಪಾರ ಭಕ್ತಿ ಹೊಂದಿದ್ದಾರೆ. ಈ ದೇಗುಲಕ್ಕೆ ಭೇಟಿ ನೀಡುವ ಮೂಲಕ ದೇವರ ಪ್ರೀತಿಗೆ ಪಾತ್ರರಾಗುವಂತೆ ಅವರು ಕೋರಿದ್ದಾರೆ. ಅಲ್ಲದೆ ಇಲ್ಲಿನ ರುದ್ರರಮಣೀಯ ದೃಶ್ಯಗಳನ್ನು ವೀಕ್ಷಿಸುವಂತೆ ಸಲಹೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ, ಆಟದ ಉಪಕರಣಗಳ ವಿತರಣೆ ಹಾಗೂ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಬಸವಣ್ಣನಿಗೆ ವಿಶೇಷ ಅಲಂಕಾರ: ಜನವರಿ 15ರಂದು ಕವಣಾಪುರ ಕ್ಷೇತ್ರದಲ್ಲಿ ವರ್ಧಂತಿ ಮಹೋತ್ಸವ ನಡೆಯಿತು. ನಡೆದಾಡುವ ಬಸವಣ್ಣ ಎಂದೇ ಭಕ್ತಿಯಿಂದ ಕರೆಯುವ ಕವಾಣಪುರ ಬಸಪ್ಪನವರಿಗೆ ಈ ವೇಳೆ ದೇಗುಲದ ವತಿಯಿಂದ ವಿಶೇಷ ನೋಟಿನ ಅಲಂಕಾರ ಮಾಡಲಾಗಿತ್ತು. ಗ್ರಾಮದ ಸಾವಿರಾರು ಭಕ್ತರು ವರ್ಧಂತಿಮಹೋತ್ಸವಲ್ಲಿ ಪಾಲ್ಗೊಂಡರು.