ಒಡಿಶಾದ ಕಟಕ್ ನಲ್ಲಿ ಜನಿಸಿದರು
ಮಂದಗಾಮಿಗಳನು ಕುಟುಕಿದರು
ರಾಷ್ಟಾçಭಿಮಾನದಿ ದುಡಿದರು
ಸ್ವಾತಂತ್ರ÷್ಯದ ಘೋಷಣೆ ಕೂಗಿದರು||
“ಆಜಾದ್ ಹಿಂದ್ ಸೇನೆ” ಕಟ್ಟಿದರು
ಸ್ವಾಯತ್ತತೆಯ ಕಿಚ್ಚನು ಹಚ್ಚಿದರು.
ಮಂದಗಾಮಿಗಳ ದೂಷಿಸಿದರು
ಸ್ವಾತಂತ್ರ÷್ಯ ಸೇನೆಗೆ ಶ್ರಮಿಸಿದರು||
ರಕ್ತ ಕೊಡಿ,ಸ್ವಾತಂತ್ರ÷್ಯ ಕೊಡುವೆನೆಂದರು
“ಜೈ ಹಿಂದ್” ಘೋಷಣೆ ಮೊಳಗಿಸಿದರು
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂದರು
ರಾಷ್ಟಿçÃಯ ಸೇನೆಯನು ಸಂಘಟಿಸಿದರು||
ಪರಾಧೀನತೆಯ ಬಂಧನ ಕಿತ್ತೆಸೆದರು
ಪರಾಕ್ರಮಿಯಾಗಿ ಬಾಳೋಣವೆಂದರು
ಪರದೇಶಿಗಳು “ನೇತಾಜಿ” ಗೆ ಹೆದರಿದರು
ಪರಮ ತೀವ್ರಗಾಮಿಗೆ ಬಸವಳಿದರು ||
ಮಂದಗಾಮಿಗಳು ಸಂಚು ಮಾಡಿದರು
ಸುಭಾಷರ ಜನಪ್ರಿಯತೆಗೆ ಕರುಬಿದರು
ಬೋಸರ ಅಂತ್ಯಕ್ಕೆ ಮುನ್ನುಡಿ ಬರೆದರು
ಪರಾಕ್ರಮಿಯನ್ನು ದೂರವಾಗಿಸಿದರು||
ನಿಮ್ಮಂತಹ ಚಾಣಾಕ್ಷ ಶೌರ್ಯವಂತನಿಗೆ
ಸ್ವಾತAತ್ರ÷್ಯ ಭಾರತೀಯರ ರಾಷ್ಟç ನಮನ
ಮತ್ತೊಮ್ಮೆ ಇಲ್ಲಿಯೇ ಆಗಲಿ ನಿಮ್ಮ ಜನನ
ಅರ್ಪಿಸುವೆ ಪರಾಕ್ರಮ ದಿನದ ನುಡಿನಮನ||
-ಪುಷ್ಪಲತಾ ಹೆಗಡೆ



