ಬೆಂಗಳೂರು: ವಿಧಾನಸೌಧ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವಿಶ್ವ ಏಡ್ಸ್ ದಿನದ ರಜತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ, ಇತ್ತಿಚಿನ ದಿನಗಳಲ್ಲಿ ಎಚ್ಐವಿ ಸೋಂಕು ಹರಡುವಿಕೆಯೂ ಕಡಿಮೆಯಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸಮಾರಂಭದಲ್ಲಿ ಭಾಗವಹಿಸಿದ ಏಡ್ಸ್ ಬಾಧಿತ 64 ವರ್ಷದ ವಯೋವೃದ್ಧ ತ್ಯಾಗರಾಜ್ಗೆ ಏಡ್ಸ್ ಮತ್ತು ಹೃದ್ರೋಗ ಸಮಸ್ಯೆ ಇದ್ದು ಈತನಿಗೆ ಸ್ಟಂಟ್ ಅಳವಡಿಸಿ ಉತ್ತಮ ಚಿಕಿತ್ಸೆ ನೀಡಿದ ಜಯದೇವ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞ ಡಾ. ಹೆಚ್.ಎಸ್.ನಟರಾಜ್ ಶೆಟ್ಟಿ ರವರ ವೈದ್ಯಕೀಯ ಸೇವೆಯನ್ನು ಗುರುತಿಸಿ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಬೆನ್ನು ತಟ್ಟಿ ಅಭಿನಂದಿಸಿದರು.
ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಮಾತನಾಡಿ `ಕರ್ನಾಟಕ ಪ್ರಿವೆನ್ಷನ್ ಸೊಸೈಟಿ ಏಡ್ಸ್ ನಿಯಂತ್ರಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. `ಸಮುದಾಯಗಳು ಮುನ್ನಡೆಸಲಿ’ ಎನ್ನುವ ಘೋಷವಾಕ್ಯದೊಂದಿಗೆ ಈ ವರ್ಷ ಏಡ್ಸ್ ದಿನಾಚರಣೆ ಆಚರಿಸಲಾಯಿತು ಹಾಗೂ ಸಮಾರಂಭದಲ್ಲಿ ಡಾ.ಹೆಚ್. ಎಸ್. ನಟರಾಜ್ ಶೆಟ್ಟಿ, ಬ್ಯಾಪ್ಟಿಸ್ಟ್ ಆಸ್ಪತ್ರೆಯ ಡಾ.ರವಿ ಕುಮಾರ್ ಸೇರಿದಂತೆ ಇನ್ನು ಅನೇಕ ವೈದ್ಯರುಗಳಿಗೆ ಸನ್ಮಾನಿಸಿದರು, ಕಾರ್ಯಕ್ರಮದಲ್ಲಿ ರಾಜ್ಯ ಏಡ್ಸ ನಿಯಂತ್ರಣ ರಾಯಭಾರಿಗಳಾದ ನಟ ನೆನಪಿರಲಿ ಪ್ರೇಮ್, ನಟಿ ಸಂಜನ ಗುರ್ಲಾನಿ ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜು, ಎ. ಪಿ. ಎಸ್. ಅಧ್ಯಕ್ಷ ಅಭಯ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.