ದೊಡ್ಡಬಳ್ಳಾಪುರ: ತಮಿಳುನಾಡಿನ ತಿರುಚಿರಾಪಳ್ಳಿ ಯಲ್ಲಿ ನಡೆದ ಸೌತ್ ಇಂಡಿಯನ್ ಜೋನ್ ಯೂನಿವರ್ಸಿಟಿ ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸಿ 4ನೇ ಸ್ಥಾನವನ್ನು ಪಡೆದು ಒಡಿಶಾದಲ್ಲಿ ನಡೆಯಲಿ ರುವ ಅಖಿಲ ಭಾರತೀಯ ಯೂನಿವರ್ಸಿಟಿ ಚಾಂಪಿಯನ್ ಶಿಪ್ ಸ್ಪರ್ಧೆಗೆ ಆಯ್ಕೆಯಾಗಿರುವ ನಿಸರ್ಗ ಯೋಗಕೇಂದ್ರದ ಅಂತರರಾಷ್ಟ್ರೀಯ ಯೋಗಪಟು ಗಾನಶ್ರೀ ಎ ಗೌಡ ಅವರನ್ನು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಹರೀಶ್ ಗೌಡ ಅವರ ನೇತೃತ್ವದಲ್ಲಿ ಅವರ ಭುವನೇಶ್ವರಿನಗರದ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಭಿನಂದಿಸಿ ಮಾತನಾಡಿದ ಅವರು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಗಳಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿರುವುದು ಶ್ಲಾಘನೀಯ, ಸಾಧಿಸುವ ಛಲವಿದ್ದರೆ ಸಾಧಿಸುವುದು ಸುಲಭ ಗುರಿ, ಮತ್ತಷ್ಟು ದೊಡ್ಡ ಮಟ್ಟದ ಸಾಧನೆಯನ್ನು ಮಾಡುವಂತೆ ಪ್ರೋತ್ಸಾಹ ನೀಡಿದರು.ಈ ಸಮಯದಲ್ಲಿ ಜೆಡಿಎಸ್ ಮುಖಂಡರುಗಳು ಹಾಗೂ ಗಾನ ಶ್ರೀ ಎ ಗೌಡ ತಾಯಿ ಯಶೋಧ ತಂದೆ ಅಶ್ವಥ್ ಇದ್ದರು.