ಆನೇಕಲ್: ಪಟ್ಟಣದ ರ್ಕಾರಿ ಡಾ. ಎಸ್. ಗೋಪಾಲರಾಜು ಪದವಿಪರ್ವ ಕಾಲೇಜಿನಲ್ಲಿ ಬಿಸಿಎ ಹಾಗೂ ಬಿಬಿಎ ವಿಭಾಗಗಳಲ್ಲಿ ಉಪನ್ಯಾಸಕರ ಕೊರತೆಯಿಂದ ವಿದ್ಯರ್ಥಿಗಳು ಕಲಿಕೆಯಲ್ಲಿ ಅಡಚಣೆ ಅನುಭವಿಸುತ್ತಿದ್ದಾರೆ. ತರಗತಿಗಳು ನಿಯಮಿತವಾಗಿ ನಡೆಯದ ಕಾರಣದಿಂದ ವಿದ್ಯರ್ಥಿಗಳ ಶಿಕ್ಷಣದ ಗುಣಮಟ್ಟ ಹಿನ್ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ವಿದ್ಯರ್ಥಿ ನಾಯಕಿ ತ್ರಿವೇಣಿ ಗಾಂಧಿ ಚಿನ್ನಪ್ಪ ಅವರ ನೇತೃತ್ವದ ವಿದ್ಯರ್ಥಿ ತಂಡವು ಆನೇಕಲ್ ತಾಲ್ಲೂಕು ದಂಡಾಧಿಕಾರಿಗಳಾದ ಶಶಿಧರ್ ಮಾಡ್ಯಾಳ್ ರವರನ್ನು ಭೇಟಿ ಮಾಡಿ ಮನವಿ ಪತ್ರವನ್ನು ಸಲ್ಲಿಸಿದರು.
ವಿದ್ಯರ್ಥಿ ನಾಯಕಿ ತ್ರಿವೇಣಿ ಗಾಂಧಿ ಚಿನ್ನಪ್ಪ ಮಾತನಾಡಿ, ಕಾಲೇಜಿನ ಬಿಸಿಎ ಹಾಗೂ ಬಿಬಿಎ ವಿಭಾಗಗಳಲ್ಲಿ ಶಾಶ್ವತ ಉಪನ್ಯಾಸಕರ ಕೊರತೆಯಿಂದ ಪಾಠಗಳು ಸರಿಯಾಗಿ ನಡೆಯುತ್ತಿಲ್ಲ. ವಿದ್ಯರ್ಥಿಗಳು ಕಾಲೇಜಿಗೆ ಬರುವುದಾದರೂ ಪಾಠಗಳು ನಡೆಯದಿರುವುದು ನಮ್ಮ ಶಿಕ್ಷಣದ ಹಕ್ಕಿನ ಹನನವಾಗಿದೆ. ರ್ಕಾರ ತಕ್ಷಣ ಕ್ರಮ ಕೈಗೊಂಡು ತಾತ್ಕಾಲಿಕ ಅಥವಾ ಶಾಶ್ವತ ಉಪನ್ಯಾಸಕರನ್ನು ನೇಮಿಸಬೇಕು ಎಂದು ಮನವಿ ಮಾಡಿದರು.
ವಿದ್ಯರ್ಥಿನಿಯರಾದ ರಂಜಿತಾ, ರಮ್ಯಾ, ಪ್ರಿಯಾ, ಕರ್ತನ ಹಾಗೂ ವಿದ್ಯರ್ಥಿ ರ್ಶನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದು, ತಮ್ಮ ವಿಭಾಗದಲ್ಲಿ ಕಲಿಕೆಗೆ ಅನುಕೂಲವಾಗುವಂತೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಡಳಿತವನ್ನು ಒತ್ತಾಯಿಸಿದರು.
ವಿದ್ಯರ್ಥಿಗಳು ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ, ಶಿಕ್ಷಣ ಇಲಾಖೆಯ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ವಿದ್ಯರ್ಥಿಗಳ ಬೇಡಿಕೆ: ಬಿಸಿಎ ಹಾಗೂ ಬಿಬಿಎ ವಿಭಾಗಗಳಿಗೆ ತಕ್ಷಣ ಉಪನ್ಯಾಸಕರನ್ನು ನಿಯೋಜಿಸಿ ಪಾಠಕ್ರಮವನ್ನು ನಿಯಮಿತಗೊಳಿಸಬೇಕು.