ಯಲಹಂಕ. ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿಯ ಹಾರೋಕೇತನ ಹಳ್ಳಿ ಗ್ರಾಮದಲ್ಲಿ ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಸಿದ್ದಗಂಗೆಯ ಪರಮ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿ ಯವರ ಐದನೇ ವರ್ಷದ ಪುಣ್ಯ ಸ್ಮರಣೆಯನ್ನು ಗ್ರಾಮದ ಮುಖಂಡರಾದಂತಹ ಸಿದ್ದಲಿಂಗಪ್ಪ ಹಾಗೂ ಅರ್ಚಕರದಂತಹ ಡಾಕ್ಟರ್ ಕೃಷ್ಣಮೂರ್ತಿ ರವರ ಮುಂದಾಳತ್ವ ದಲ್ಲಿ ಹಾಗೂ ಯುವ ಮುಖಂಡರುಗಳಾದಂತಹ ನಾಗೇಶ್, ಹೆಚ್ಎಸ್ ರೇವಣಸಿದ್ದಪ್ಪ,ಗೋವಿಂದರಾಜು( ಎಸ್ ಎಲ್ ವಿ.)ಪ್ರಕಾಶ್,
ಪರಮೇಶ್ ಗೋವಿಂದರಾಜು( ಆರ್ ಎಂ ಸಿ ) ಗ್ರಾಮ ಪಂಚಾಯಿತಿ ಸದಸ್ಯರಾದಂತಹ ರಾಜೇಶ್ ಎಚ್ ಜಿ ಸಂಗಡಿಗರಾದಂತಹ ಪ್ರಮೋದ್,ಭರತ್ ಇನ್ನು ಹಲವಾರು ಯುವಕರ ನೆರವಿನಿಂದ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡುವ ಮೂಲಕ ದಾಸೋಹ ದಿನವನ್ನು ಭಕ್ತಿ ಪೂರ್ವಕವಾಗಿ ಗ್ರಾಮಸ್ಥರೆಲ್ಲ ಸೇರಿ ಆಚರಿಸಲಾಯಿತು.
ಬಳಿಕ ಮಾತನಾಡಿದ ನಾಗೇಶ್ ಎಚ್ ಎಸ್ ಪರಮಪೂಜ್ಯ ಸಿದ್ದಗಂಗಾ ಶ್ರೀಗಳ ಬದುಕು ನಮಗೆ ಆದರ್ಶ ಲಕ್ಷಾಂತರ ಮಕ್ಕಳ ಪಾಲಿಗೆ ಅನ್ನ ಅಕ್ಷರ ವಸತಿ ನೀಡಿ ಬೆಳಕಾಗುವ ಮೂಲಕ ಆದರ್ಶ ಪುರುಷರಾಗಿದ್ದವರು ಇಂತಹ ಮಹಾನ್ ಪುರುಷರ ದರ್ಶನ ಪಡೆದ ನಾವೇ ಧನ್ಯರು ಎಂದು ಹರುಷ ವ್ಯಕ್ತಪಡಿಸಿದರು.
ನಡೆದಾಡುವ ದೇವರು ಶಿವಕುಮಾರ ಮಹಾಸ್ವಾಮಿ ಗಳಿಗೆ ಭಾರತ ರತ್ನ ನೀಡಿ ಗೌರವಿಸಬೇಕು ಶ್ರೀಗಳ ನಿಸ್ವಾರ್ಥ ಸೇವೆಗೆ ಈ ಮೂಲಕ ಗೌರವ ಸಮರ್ಪಣೆ ಸಲ್ಲಿಸಬೇಕು ಎಂದು ಯುವ ಮುಖಂಡರಾದ ಗೋವಿಂದರಾಜು (ಆರ್ಎಂಸಿ) ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಡಕಿಮಾರನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಗಂಗರಾಜು, ಕುಮಾರ್, ಲೋಕೇಶ್, ಬಸವರಾಜ್, ಸೇರಿದಂತೆ ಊರಿನ ಗ್ರಾಮಸ್ಥರು ಮುಖಂಡರು ಭಾಗಿಯಾಗಿದ್ದರು.