ದಾವಣಗೆರೆ: ಲಾರಿ ಹರಿದು ಪಾದಾಚಾರಿ ಸಾವಿಗೆ ಕಾರಣನಾಗಿದ್ದ ಚಾಲಕನನ್ನು ೩೨ ವರ್ಷಗಳ ಬಳಿಕ ಜಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಹಾಸನ ಜಿಲ್ಲೆಯ ಅರಸೀಕೆರೆ ನಿವಾಸಿ ಗಂಗಾಧರಪ್ಪ (೬೭) ಎಂದು ಗುರುತಿಸಲಾಗಿದೆ. ಈತ ೧೯೯೪ರಲ್ಲಿ ಕಲ್ಲೇದೇವಪುರ ಬಳಿ ರಾಷ್ಟಿçÃಯ ಹೆದ್ದಾರಿ ೧೩ರಲ್ಲಿ ಎಸಗಿದ್ದ ಅಪಘಾತದಲ್ಲಿ ಪಾದಾಚಾರಿಯೊಬ್ಬರು ಸಾವನ್ನಪ್ಪಿದ್ದರು. ಅಪಘಾತದ ಬಳಿಕ ಇಷ್ಟು ದಿನ ತಲೆಮರೆಸಿಕೊಂಡಿದ್ದ ಆರೋಪದ ಮೇಲೆ ಚಾಲಕನನ್ನು ಬಂಧಿಸಲಾಗಿದೆ.
ಇನ್ಸ್ಪೆಕ್ಟರ್ ಸಿದ್ದರಾಮಯ್ಯ ಹಾಗೂ
ಎಸ್ಐ ವೆಂಕಟೇಶ ನೇತೃತ್ವದಲ್ಲಿ ಕಾರ್ಯಾ
ಚರಣೆ ನಡೆಸಿ ಆರೋಪಿಯನ್ನ ಬಂಧಿಸಿ, ಜಗಳೂರು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಕೋರ್ಟ್ ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಲಾರಿ ಹರಿದು ಪಾದಚಾರಿ ಸಾವು ಪ್ರಕರಣ ೩೨ ವರ್ಷಗಳ ಬಳಿಕ ಚಾಲಕ ಬಂಧನ



