ಭೂಕಬಳಿಕೆ, ಒತ್ತುವರಿ ಬಡವರ ಗೋಳಾಟ, ಮಧ್ಯಮ ವರ್ಗದವರ ಜಂಜಾಟ ಹಾಗೂ ಸಿರಿವಂತರ ಹಗ್ಗ ಜಗ್ಗಾಟಗಳ ವಾಸ್ತವತೆಯ ಅನಾವರಣವನ್ನು ಬಿಂಬಿಸುವ ಚಲನಚಿತ್ರ ಶ್ರೀ ವೆಂಕಟಪುರ. ಶ್ರೀ ವರಲಕ್ಷ್ಮಿ ಸಿನಿ ಕ್ರಿಯೇಷನ್ಸ್ ನಲ್ಲಿ ಮೂಡಿ ಬಂದಿರುವ ಈ ಚಲನಚಿತ್ರವು ಸದಭಿರುಚಿಯ ಕಮರ್ಷಿಯಲ್ ಚಿತ್ರ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ತೆರೆ ಮೇಲೆ ಬರಲು ಸಜ್ಜಾಗುತ್ತಿದೆ.
ಸಿನಿಮಾದ ಆರಂಭದಿಂದ ಕೊನೆಯ ಹಂತದವರೆಗೂ ಕುತೂಹಲವನ್ನು ಮೂಡಿಸುವ ನೈಜ ಘಟನೆ ಯಾಧಾರಿತ ಸಿನಿಮಾ ಇದು. ಇದರಲ್ಲಿ ಥ್ರಿಲ್ಲಿಂಗ್ ಇರಲಿದೆ. ಮನೆ ಮಂದಿಯೆಲ್ಲ ನೋಡ ಬಹುದಾದ ಚಿತ್ರ. ಈ ಚಿತ್ರದ ವಿಶೇಷತೆಯೆಂದರೆ ಟೈಟಲ್ಗೆ ತಕ್ಕ ಹಾಗೆ ಮೂರು ಕಂಟೆಂಟ್ ಮತ್ತು ಒಳ್ಳೆ ಮೇಕಿಂಗ್ ಇರುವ ಕಥೆಯನ್ನು ಒಳಗೊಂಡಿರುವ ಸಿನಿಮಾ ಇದು.
ಚಿತ್ರದ ಕೊನೆಯಲ್ಲಿ ವೆಂಕಟೇಶ್ವರನ ದರ್ಶನ ವಾಗುತ್ತದೆ ಎಂದು ನಿರ್ದೇಕರಾದ ಶ್ರೀ ಮಂಜು ಅವರು ತಮ್ಮ ಮನದ ಮಾತುಗಳನ್ನು ಹಂಚಿಕೊಂಡರು.ಬೆಂಗಳೂರು, ದೊಡ್ಡಬಳ್ಳಾಪುರ, ದೇವನಹಳ್ಳಿ ಹಾಗೂ ಮಂಡ್ಯ ಜಿಲ್ಲೆ ಸುತ್ತಮುತ್ತ ಅದ್ಭುತ ಪರಿಸರಗಳಲ್ಲಿ ಅದ್ಧೂರಿಯಾಗಿ ಚಿತ್ರೀಕರಣ ನಡೆಯುತ್ತಿದೆ.
ಶೇಕಡ 90 ಭಾಗ ಚಿತ್ರೀಕರಣ ಮುಗಿಸಿರುವ ಈ ಚಿತ್ರದ ನವ ನಾಯಕ ವಿಶ್ವನಾಥ, ನಾಯಕಿ ಅನಿಕ ಇವರೊಂದಿಗೆ ಹಿರಿಯ ಕಲಾವಿದೆ ಭವ್ಯ, ಶೈಲಜ ಶರ್ಮ, ಲಯಕೋಕಿಲ, ಜಯಪ್ರಕಾಶ್, ಸಂಗೀತ, ಅಶ್ವಥ್, ನಾಗರಾಜ ಹಾಗೂ ಇನ್ನೂ ಮುಂತಾದ ಕಲಾವಿದರಿದ್ದಾರೆ. ಚಿತ್ರದ ಕಥೆ ಚಿತ್ರಕಥೆ ಸಂಭಾಷಣೆ ಶ್ರೀ ಮಂಜು, ನಿರ್ಮಾಪಕರು ಪ್ರಭಾಕರ್ ಕೆ, ಡಿಒಪಿ ದೀಪು, ಸಹ ನಿರ್ದೇಶನ ಶರತ್, ಅಶ್ವಥ್ ಶ್ರೀನಿವಾಸ್. ಚಲನಚಿತ್ರಕ್ಕೆ ಹಾಗೂ ತಂಡಕ್ಕೆ ಶುಭವಾಗಲಿ.