ವಾಷಿಂಗ್ ಟನ್: ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್, ಸೇನಾ ಮುಖ್ಯಸ್ಥ ಫೀಲ್ಡ್ ಮರ್ಷಲ್ ಅಸಿಮ್ ಮುನೀರ್ ಅವರೊಂದಿಗೆ ಮುಂದಿನ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ.
ಪಾಕಿಸ್ತಾನದ ಇಬ್ಬರು ನಾಯಕರು ಸೆಪ್ಟೆಂಬರ್ ೨೫ ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂರ್ಭದಲ್ಲಿ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಪಾಕಿಸ್ತಾನದ ಖೈಬರ್ ನ್ಯೂಸ್ ವರದಿ ಮಾಡಿದೆ.
ಪಾಕಿಸ್ತಾನದ ವಿನಾಶಕಾರಿ ಪ್ರವಾಹದಿಂದ ಹಿಡಿದು ಕತಾರ್ ಮೇಲಿನ ಇಸ್ರೇಲ್ ದಾಳಿಯ ಪರಿಣಾಮದವರೆಗಿನ ವಿಷಯಗಳ ಕುರಿತ ರ್ಚೆಗಳು ಸಭೆಯ ಕರ್ಯಸೂಚಿಯಲ್ಲಿ ಸೇರಿವೆ. ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಗಳನ್ನು ಈ ಉನ್ನತ ಮಟ್ಟದ ಸಂವಾದದಲ್ಲಿ ಪರಿಹರಿಸುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.
ವಾಷಿಂಗ್ಟನ್ನಲ್ಲಿರುವ ಇಂಟರ್-ರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಅಥವಾ ಪಾಕಿಸ್ತಾನದ ರಾಯಭಾರ ಕಚೇರಿಯಿಂದ ಇಲ್ಲಿಯವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ, ಆದರೆ ಅಸಿಮ್ ಮುನೀರ್ ಅವರ ಎರಡು ಸತತ ವಾಷಿಂಗ್ಟನ್ ಭೇಟಿಗಳ ನಂತರ ವರದಿ ಬಂದಿದೆ.



