ವಾಷಿಂಗ್ಟನ್: ಇರಾನ್ ಜೊತೆ ಯುದ್ಧ ಮಾಡುತ್ತಿರುವ ಟ್ರಂಪ್ ಮತ್ತೊಂದು ಕಡೆ ಹೊಸದಾಗಿ ಸುಂಕ ಸಮರ ಆರಂಭಿಸಿದ್ದಾರೆ. ಈ ಬಾರಿ ಟ್ರಂಪ್ ಕಣ್ಣು ಬ್ರಾಂಡೆಡ್ ಔಷಧಗಳ ಮೇಲೆ ಬಿದ್ದಿದ್ದು 100% ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದಾರೆ.ಪೇಟೆಂಟ್ ಹೊಂದಿರುವ ಮತ್ತು ಬ್ರಾಂಡೆಡ್ ಔಷಧಗಳನ್ನು ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಕಂಪನಿಗಳ ಮೇಲೆ 100% ಸುಂಕ ವಿಧಿಸುವ ಕಾರ್ಯಾದೇಶಕ್ಕೆ ಸಹಿ ಹಾಕಿದ್ದಾರೆ.ಔಷಧ ತಯಾರಿಕಾ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಅಮೆರಿಕಕ್ಕೆ ಸ್ಥಳಾಂತರಿಸುವAತೆ ಒತ್ತಡ ಹೇರುವುದು, ಔಷಧಗಳಿಗಾಗಿ ಚೀನಾ ಅಥವಾ ಇತರ ದೇಶಗಳ ಮೇಲೆ ಅವಲಂಬಿತವಾಗುವುದನ್ನು ಕಡಿಮೆ ಮಾಡುವುದು ಮತ್ತು ಅಮೆರಿಕದ ಒಳಗೇ ಉದ್ಯೋಗ ಹಾಗೂ ಉತ್ಪಾದನೆಯನ್ನು ಹೆಚ್ಚಿಸುವುದು ಈ ನೀತಿಯ ಮುಖ್ಯ ಗುರಿಯಾಗಿದೆ.ಯಾವ ಕಂಪನಿಗಳು ಮುಂದಿನ 4 ವರ್ಷಗಳಲ್ಲಿ ಅಮೆರಿಕದಲ್ಲಿ ಕಾರ್ಖಾನೆ ತೆರೆಯಲು ಒಪ್ಪುತ್ತವೆಯೋ ಅವುಗಳ ಮೇಲಿನ ಸುಂಕವನ್ನು 20% ಕ್ಕೆ ಇಳಿಸಲು ಈ ಕಾರ್ಯಾದೇಶದಲ್ಲಿ ಅವಕಾಶ ನೀಡಲಾಗಿದೆ.ಅಮೆರಿಕದ ಹೊರಗೆ ತಯಾರಾದ ಮತ್ತು ಯಾವುದೇ ರಿಯಾಯಿತಿ ಒಪ್ಪಂದ ಮಾಡಿಕೊಳ್ಳದ ಪೇಟೆಂಟ್’ ಅಥವಾ ಬ್ರಾಂಡೆಡ್ ಔಷಧಗಳ ಮೇಲೆ 100% ಸುಂಕ ವಿಧಿಸಲಾಗುತ್ತದೆ.



