ಟೆಹ್ರಾನ್/ವಾಷಿಂಗ್ಟನ್: ಇರಾನ್-ಅಮೆರಿಕ ನಡುವಿನ ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೇ ಹಾರ್ಮಜ್ ಜಲಸಂಧಿಯ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಿಗ್ಭಂಧನ ಘೋಷಿಸಿದ್ದಾರೆ. ಇದರಿಂದ ಕಚ್ಚಾ ತೈಲ ಬೆಲೆ ಶೇ.11 ರಷ್ಟು ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.ಕಚ್ಚಾ ತೈಲ ಬೆಲೆ ಶೇ.11 ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರಲ್ 105 ಡಾಲರ್ (9,774 ರೂ.) ತಲುಪಿದೆ. WಖಿI ಕಚ್ಚಾ ತೈಲವು ಪ್ರತಿ ಬ್ಯಾರಲ್ಗೆ 104.25 ಡಾಲರ್ (9,704 ರೂ.) ನಷ್ಟಿದ್ದರೆ, ಬ್ರೆಂಚ್ ಕಚ್ಚಾತೈಲ ಬ್ಯಾರಲ್ಗೆ 101 ಡಾಲರ್ ಸಮೀಪದಲ್ಲಿ ಸೋಮವಾರ ವಹಿವಾಟು ನಡೆಸುತ್ತಿದೆ.
ಹಾರ್ಮುಜ್ ಮೇಲೆ ದಿಗ್ಭಂಧನ: ಸಂಧಾನ ಮಾತುಕತೆ ವಿಫಲವಾದ ಬೆನ್ನಲ್ಲೇ ಟ್ರಂಪ್ ಹಾರ್ಮುಜ್ ಜಲಸಂಧಿ ಮೇಲೆ ನಿರ್ಬಂಧ ಹೇರಿದ್ದಾರೆ. ಪರಮಾಣು ಒಪ್ಪಂದಕ್ಕೆ ಇರಾನ್ ಒಪ್ಪದ ನಿಲುವನ್ನು ಉಲ್ಲೇಖಿಸಿ, ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರುತ್ ಸೋಷಿಯಲ್ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊAಡಿದ್ದಾರೆ.ಹಾರ್ಮುಜ್ ಜಲಸಂಧಿ ಮೂಲಕ ಹಾದುಹೋಗುವ ಎಲ್ಲಾ ಹಡಗುಗಳನ್ನ ತಡೆಹಿಡಿಯುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುಎಸ್ ನೌಕಾಪಡೆಗೆ ಸೂಚನೆ ನೀಡಿದ್ದಾರೆ.
ಹಾರ್ಮಜ್ ಜಲಸಂಧಿ ಮೇಲೆ ಟ್ರಂಪ್ ದಿಗ್ಭಂಧನ



