This is the title of the web page
This is the title of the web page

ಪ್ರಪಂಚವನ್ನು ಉಳಿಸಲು ಪ್ರಯತ್ನಿಸುತ್ತಿದೆ ಸಾಕ್ಷ್ಯಚಿತ್ರ

ಮೈಸೂರು ಮೂಲದ ಇಂಜಿನಿಯರ್ ನಹೇಶ್ಪೋಲ್ ಜಾಹಿರಾತುಗಳನ್ನು ಸಿದ್ದಪಡಿಸುವುದು, ರಕಾರ್ಡಿಂಗ್ ಸ್ಟುಡಿಯೋ ಮತ್ತು ಇಟ್ಸ್ ಎಬೈಟ್ ಚಾಯ್ಸಸ್ ಎನ್ನುವ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದೆಲ್ಲಾದರ ಅನುಭವದಿಂದ ಈಗ `ಪ್ರಪಂಚವನ್ನು ಉಳಿಸಲು ಪ್ರಯತ್ನಿಸುತ್ತಿದೆ’ ಎನ್ನುವ ವಿನೂತನ 100 ವರ್ಷಗಳ ಬಹುಭಾಷಾ ಸಾಕ್ಷಚಿತ್ರ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ. ಜೂನ್ 4, 2020ರಂದು ಶುರುವಾದ ಸಾಕ್ಷಚಿತ್ರವು ಇಂದು 1001ನೇ ದಿನಕ್ಕೆ ಕಾಲಿಟ್ಟಿದೆ.

ಒಬ್ಬ ಮನುಷ್ಯನ ಎಲ್ಲಾ ಮಾನವನ ವಿಚಾರವನ್ನು ಒಂದು ಮಾಡಲಿಕ್ಕೆ ಪ್ರಯತ್ನ ಮಾಡುತ್ತಿರುವುದು. ಅಂದರೆ ಮಾನವಿಯತೆಯನ್ನು ಒಂದುಗೂಡಿಸುವ ಮತ್ತು ವಿಕಸನಗೊಳ್ಳುವ ನೂರು ವರ್ಷಗಳ ಮಿಷನ್ದಲ್ಲಿ ಸಾಮಾನ್ಯ ನಾಗರಿಕನ ಪ್ರಯಾಣವನ್ನು ಅನುಸರಿಸುತ್ತದೆ. ಅದರ ಪ್ರಯತ್ನ ಏನೆಂದರೆ ಹೊಸ ಪ್ರಜಾಪ್ರಭುತ್ವ ಮಾದರಿ. ಈ ಮಾದರಿ ಪರೀಕ್ಷೆ ಮಾಡಲು ಒಂದು ಇವೆಂಟ್ ಹಮ್ಮಿಕೊಳ್ಳಲಾಗುವುದು.
ಉದಾಹರಣೆಗೆ ಹಿಂದಿಯ `ನಾಯಕನ್’ ಚಿತ್ರದಲ್ಲಿ ಅನಿಲ್ಕಪೂರ್ ಒಂದು ದಿನದ ಮಟ್ಟಿಗೆ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿ ಇಡೀ ರಾಜ್ಯವನ್ನು ಹತೋಟಿಗೆ ತರುವಂತೆ, ಇದರಲ್ಲಿ ಅದೇ ರೀತಿಯ ಪ್ರಯತ್ನ ಮಾಡಲಾಗುತ್ತಿದೆ.

 

ಇನ್ನು ವಿಚಾರಣೆ ನಡೆಸಲು ಸ್ಪಷ್ಟತೆ ತೆಗೆದುಕೊಂಡು, 100 ಜನರು ಒಬ್ಬ ಮನುಷ್ಯನನ್ನು ಏನು ಮಾಡಬೇಕು. ಅದನ್ನು ಹೊಸ ಪ್ರಜಾಪ್ರಭುತ್ವ ಮಾದರಿ ಪರೀಕ್ಷೆಗೆ ಒಳಪಡಿಸಿವುದು. ಆವಾಗ ಏನು ಆಗುತ್ತೇ ಎಲ್ಲಾ 100 ಜನರ ಧ್ವನಿ, ವಿಚಾರಗಳು ಸರಿಯಾಗಿ ಬರುತ್ತದೆ. ಒಬ್ಬನೇ ಹೇಳುವ ಆಗಿಲ್ಲ. ನಿನ್ನ ವಿಚಾರ ಅದಲ್ಲ ಅಂತ ಹೇಳಂಗಿಲ್ಲ. ಅಂತಹ ಮಾದರಿ ಪರೀಕ್ಷೆಯನ್ನು `ವಿಶ್ವ ಯೋಗ ದಿನ’ ಜೂನ್ 21, 2023 ಶುಭದಿನದಂದು ಪರೀಕ್ಷೆಗೆ ಬಿಡಲಾಗುವುದು. ಅಂದು ಪ್ರತಿಯೊಬ್ಬ ವ್ಯಕ್ತಿಯು ತನ್ನ ಅಭಿಪ್ರಾಯ ಮತ್ತು ಅಲ್ಲಿಗೆ ಹೋಗುವ ಹಂತಗಳನ್ನು ವ್ಯಾಖ್ಯಾನಿಸುತ್ತಾನೆ.

ಈ ಇವೆಂಟ್ ಎಲ್ಲಾ ವರ್ಗದ ಜನರನ್ನು ಒಟ್ಟುಗೂಡಿಸಲು ಹಾಗೂ ನಿರ್ಣಾಯಕ ಸಾಮೂಹಿಕ ಕ್ರಿಯೆಯನ್ನು ರಚಿಸಲು ಆಶಿಸುತ್ತದೆ. ಇಂತಹ ಅಂಶಗಳನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಒಟ್ಟಾರೆ ಈ ಗುರಿಯು ಶಾಂತಿಯುತ, ಸಾಮರಸ್ಯ ಹಾಗೂ ಸಮರ್ಥನೀಯವಾದ ಪ್ರಪಂಚದ ಕಡೆಗೆ ಕೆಲಸ ಮಾಡುವುದು.
ಎಲ್ಲರಿಗೂ ಉತ್ತಮ ಜಗತ್ತನ್ನು ರಚಿಸುವಲ್ಲಿ ಇದು ಜನರನ್ನು ಪ್ರೇರೆಪಿಸುತ್ತದೆ.