ಬೆಂಗಳೂರು: ಭಾರತದ ಮುಂಚೂಣಿ ಅಡುಗೆಮನೆ ಅಪ್ಲಯನ್ಸ್ ಸಂಸ್ಥೆಯಾದ ಟಿಟಿಕೆ ಪ್ರೆಸ್ಟೀಜ್, ತನ್ನ ಇತ್ತೀಚಿನ ಆವಿಷ್ಕಾರ ಪ್ರೆಸ್ಟೀಜ್ ಎಂಡ್ಯೂರಾ ಪ್ರೊ ಮಿಕ್ಸರ್ ಗ್ರೈಂಡರ್(Prestige Endura Pro Mixer Grinder)) ಪರಿಚಯಿಸಿದೆ. ಬಿಡುಗಡೆ ಕಾರ್ಯಕ್ರಮವು ಬೆಂಗಳೂರಿನ ಇಂದಿರಾನಗರದಲ್ಲಿರುವ ಪೈ ಇಂಟ್ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿ.,ನಲ್ಲಿ ಜನವರಿ 18,2024ರಂದು ನಡೆಯಿತು.
ಪ್ರೆಸ್ಟೀಜ್ ಎಂಡ್ಯೂರಾ ಪ್ರೊ 14 ಕಾರ್ಯಾಚರಣೆಗಳನ್ನು ಮಾಡುವ ಎಲ್ಲವೂ ಒಂದರಲ್ಲೇ ಒಳಗೊಂಡ ಮಿಕ್ಸರ್ ಗ್ರೈಂಡರ್ ಆಗಿದ್ದು, ಬಾಲ್ ಬೇರಿಂಗ್ಗಳಿಂದ ಸಜ್ಜುಗೊಂಡಿರುವ ಪರಿಶುದ್ಧವಾದ ತಾಮ್ರದಿಂದ ತಯಾರಿಸಲಾದ 1000 Wಮೋಟಾನ ಶಕ್ತಿಯನ್ನು ಹೊಂದಿದೆ. ಎಂಡ್ಯೂರಾ ಪ್ರೊ, ಸಮರ್ಥ ಕಾರ್ಯಕ್ಷಮತೆ(ದಕ್ಷತೆ), ಕನಿಷ್ಟ ಶಬ್ದ ಹಾಗೂ ದೀರ್ಘಕಾಲ ಮೋಟಾರ್ ಬಾಳಿಕೆಯನ್ನು ಖಾತರಿಪಡಿಸುತ್ತದೆ.
14 ಕಾರ್ಯಾಚರಣೆಗಳು: ವೆಟ್ ಗ್ರೈಂಡಿಂಗ್(ಹಿಟ್ಟು ರುಬ್ಬುವುದು), ಡ್ರೈ ಗ್ರೈಂಡಿಂಗ್(ಒಣಪುಡಿ ಮಾಡುವುದು), ಚಟ್ನಿ ತಯಾರಿಕೆ, ಜೂಸ್ ತಯಾರಿಸುವುದು, ಕತ್ತರಿಸುವುದು, ಹಿಟ್ಟು ನಾದುವುದು, ದಪ್ಪ ಸಿಪ್ಪೆ ತೆಗೆಯುವುದು, ತೆಳುಸಿಪ್ಪೆ ತೆಗೆಯುವುದು, ಸರಿಪಡಿಸಬಹುದಾದ ಸ್ಲೈಸಿಂಗ್, ಮಿನ್ಸಿಂಗ್, ಸಿಟ್ರಸ್ ಜೂಸಿಂಗ್, ಫಿಂಗರ್ ಚಿಪ್ಸ್ ಕತ್ತರಿಸುವಿಕೆ ಮತ್ತು ಮಿಶ್ರಣಮಾಡಿ ಹಾಗೂ ಇಡಿ-ಮುಂತಾದವುಗಳನ್ನು ಒಳಗೊಂಡಿದೆ.
ಈ ಉತ್ಪನ್ನದ ಬಿಡುಗಡೆಯನ್ನು ಪೈ ಇಂಟ್ನ್ಯಾಷನಲ್ ಲಿ., ನಡೆಸಿಕೊಟ್ಟಿತು ಮತ್ತು ಎಮ್ಡಿ ರಾಜ್ಕುಮಾರ್ ಪೈ; ಫೈನಾನ್ಸ್ ವಿಭಾಗದ ನಿರ್ದೇಶಕಿ ಶ್ರೀಮತಿ ಮೀನ ರಾಜ್ಕುಮಾರ್ ಪೈ; ಹಾಗೂ ಪೈ ಇಂಟ್ನ್ಯಾಷನಲ್ ಲಿ.,ನ ಲಾಜಿಸ್ಟಿಕ್ಸ್ ಮುಖ್ಯಸ್ಥ ರಮೇಶ್ ಉದ್ಘಾಟನೆ ನೆರವೇರಿಸಿದರು. ಹಿರಿಯ ಜಿಎಮ್ ಅನಿಲ್ ಕುಮಾರ್ ಜಿಎಸ್; ಐಒ, ZSಒ ಶ್ರೀ ಪ್ರಾಣೇಶ್; ಮತ್ತು ಟಿಟಿಕೆ ಪ್ರೆಸ್ಟೀಜ್ನ ಮಾರ್ಕೆಟಿಂಗ್ ವಿಭಾಗದ ಅಭಿಷೇಕ್ ಮತ್ತು ಮತ್ತು ದೀಪಕ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಟಿಟಿಕೆ ಪ್ರೆಸ್ಟೀಜ್ ಲಿ.,ನ ಹಿರಿಯ ಜಿಎಮ್ ಶ್ರೀ ಅನಿಲ್ ಕುಮಾರ್ ಜಿಎಸ್, “ಪೈ ಎಲೆಕ್ಟ್ರಾನಿಕ್ಸ್ನ ಸಹಭಾಗಿತ್ವದಲ್ಲಿ ಎಂಡ್ಯೂರಾ ಪ್ರೊ ಮಿಕ್ಸರ್ ಪರಿಚಯಿಸಲು ನಮಗೆ ಅತ್ಯಂತ ಸಂತೋಷವಾಗುತ್ತಿದೆ. ತನ್ನ ಬಾಳಿಕೆ ಹಾಗೂ ಆಧುನಿಕ ಗುಣವಿಶೇಷತೆಗಳಿಂದಾಗಿ ಈ ಉತ್ಪನ್ನ ಶ್ರೇಣಿಯು ತಾರೆಯಾಗಿದೆ. ಶಬ್ದವನ್ನು ಕಡಿಮೆ ಮಾಡುವುದಕ್ಕಾಗಿಯೇ ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿರುವ ಮೋಟಾರ್ ಈ ಉತ್ಪನ್ನದ ವಿಶೇಷತೆಯಾಗಿದೆ. ಈ ಉತ್ಪನ್ನದ ಮೋಟಾರ್ ಗುಣಮಟ್ಟದೊಡನೆ ಬೇರೆ ಯಾವುದೇ ತರ ಅಡುಗೆಮನೆ ಅಪ್ಲಯನ್ಸ್ ಕೂಡ ಸ್ಪರ್ಧಿಸಲಾಗದು ಎಂದು ಹೇಳಿದರು.