ಬೆಂಗಳೂರು: ಟಿ ಎಸ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಡುವತ್ತಿ ಗ್ರಾಮದಲ್ಲಿ ಮುನೇಗೌಡ ಎಂಬಾತನು ಮದುವೆಯಾಗುತ್ತೇನೆ ಎಂದು ನಂಬಿಸಿ ಮತ್ತು ವಂಚಿಸಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿ ಪೊಲೀಸರಿಗೆ ಅತಿಥಿಯಾಗಿರುತ್ತಾನೆ. ಆರೋಪಿ ಮುನೇಗೌಡನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿರುತ್ತಾರೆ. ಮತ್ತೊಂದು ಪೋಕ್ಸೋ ಪ್ರಕರಣ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಅಪ್ರಾಪ್ತ ಬಾಲಕಿಗೆ ಆಸೆ ಆಮಿಷ ಒಡ್ಡಿ ಅತ್ಯಾಚಾರವೆಸಗಿರುತ್ತಾನೆ ಎಂದು ಪೋಷಕರು ನೀಡಿದ ದೂರಿನ ಮೇಲೆ ಹೊಸಕೋಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ . ಆರೋಪಿಯನ್ನು ಹೊಸಕೋಟೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸುತ್ತಾರೆ.



