ದಾವಣಗೆರೆ: ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಸಹೋದರರು ನೀರಿನಲ್ಲಿ ಮುಳುಗಿ ದಾರುಣ ಸಾವನ್ನಪ್ಪಿದ್ದಾರೆ.ವಿಜಯನಗರ ಜಿಲ್ಲೆಯ ಹರಪನ ಹಳ್ಳಿ ತಾಲೂಕಿನ ಹಲವಾಗಲು ಗ್ರಾಮದಲ್ಲಿ ಘಟನೆ ನಡೆದಿದೆ. ಮನು (19) ಹಾಗೂ ಪ್ರಜ್ವಲ್ (18) ಮೃತ ಸಹೋದರರು. ತಂದೆಯ ಕಣ್ಣೆದುರಲ್ಲೇ ಅಣ್ಣ-ತಮ್ಮ ಪ್ರಾಣ ಬಿಟ್ಟಿದ್ದಾರೆ. ತಂದೆಯೊAದಿಗೆ ತುಂಗಭದ್ರಾ ನದಿಗೆ ಮೂವರು ಸಹೋದರರು ಈಜಲು ತೆರಳಿದ್ದರು. ಇಬ್ಬರು ಸಹೋದರರು ಆಯತಪ್ಪಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ತಂದೆ ಮಂಜಪ್ಪ ಅವರ ಸಮಯ ಪ್ರಜ್ಞೆಯಿಂದ ಕೊನೆಯ ಮಗ ಚಿರಂಜೀವಿ ಸಾವಿನಿಂದ ಪಾರಾದರು.



