ಬೆಂಗಳೂರು : ಚಿನ್ನ ಮಾರಾಟ ಮಾಡಿ ಹಣ ಕೊಡಿಸುವುದಾಗಿ ಹೇಳಿ ವಂಚನೆ ಎಸೆಗಿದ್ದ ಪ್ರಕರಣಕ್ಕೆಸಂಬಂಧಪಟ್ಟಂತೆ ಬೆಂಗಳೂರಿನ ಹಲಸೂರು ಗೇಟ್ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ ಜಿರನ್ ಸಾಕಾರಿಯ ಮತ್ತು ರಾಜೇಂದ್ರ ಸಾಕಾರಿಯ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ೧.೬೦ಕೋಟಿ ರೂಪಾಯಿ ಮೌಲ್ಯದ ೧೩೦೦ ಗ್ರಾಂ ಚಿನ್ನದ ಗಟ್ಟಿ ವರ್ಷಕ್ಕೆ ಪಡೆದುಕೊಂಡಿದ್ದು ಬಿ ಹರ್ಷಿತ್ ಎಂಬುವವರಿಗೆ ಆರೋಪಿಗಳು ವಂಚನೆ ಎಸಗಿದ್ದರು.ಜಿರನ್ ರಾಜೇಂದ್ರ ಮತ್ತು ಹರ್ಷಿತ್ ಒಟ್ಟಿಗೆ ವ್ಯವಹಾರ ಮಾಡಿಕೊಂಡಿದ್ದರು ಹರ್ಷಿತ್ ಬಳಿಯಿಂದ ಆರೋಪಿಗಳು ಚಿನ್ನದ ಗಟ್ಟಿ ಪಡೆದುಕೊಂಡಿದ್ದರು. ಚಿನ್ನದ ಗಟ್ಟಿ ಮಾರಾಟ ಮಾಡಿ ಹಣ ಕೊಡುವುದಾಗಿ ಹರ್ಷಿತ್ ನನ್ನು ನಂಬಿಸಿದ್ದರು.
ಕಳೆದ ೩ ತಿಂಗಳ ಹಿಂದೆ ಜೀರನ್ ಮತ್ತು ರಾಜೇಂದ್ರ ಚಿನ್ನದ ಗಟ್ಟಿ ಪಡೆದಿದ್ದರು. ೩ ತಿಂಗಳಿAದ ಹಣ ಚಿನ್ನ ಕೇಳಿದರು ನೀಡದೆ ವಂಚನೆ ಎಸಗಿದ್ದಾರೆ. ಹಲಸೂರು ಗೇಟ್ ಪೊಲೀಸ್ ಠಾಣೆಗೆ ಈ ಕುರಿತು ಹರ್ಷಿತ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿ ಪೊಲೀಸರು ಜೀರನ್ ಮತ್ತು ರಾಜೇಂದ್ರನ ಅರೆಸ್ಟ್ ಮಾಡಿದ್ದಾರೆ ವಿಚಾರಣೆ ವೇಳೆ ಹಲವರಿಗೆ ವಂಚನೆ ಮಾಡಿರುವುದು ಕೂಡ ಬೆಳಕಿಗೆ ಬಂದಿದೆ ಈ ಹಿಂದೆ ಕೂಡ ವಂಚನೆ ಕೇಸ್ ನಲ್ಲಿ ಆರೋಪಿಗಳು ಬಂಧಿತರಾಗಿದ್ದರು ಎಂದು ತಿಳಿದುಬಂದಿದೆ.



