ಕುಣಿಗಲ್: ಕುಡಿಯಲು ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ, ಮನೆ ಮಾಲೀಕನ ಮೇಲೆ ಗುಂಡು ಹಾರಿಸಿ ಹಾಡು ಹಗಲೇ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂದಿಸಿದಂತೆ ಜಾರ್ಖಂಡ್ ರಾಜ್ಯದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕುಣಿಗಲ್ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಜನತೆಯನ್ನು ಬೆಚ್ಚಿ ಬೀಳಿಸಿದ ಶೂಟೌಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ರಾಜ್ಯದ ಎಜಾಜ್ ಮತ್ತು ಸಹೇಬ್ಉಲ್ಲಾನನ್ನು ಕುಣಿಗಲ್ ಪೊಲಿಸರು ಬಂಧಿಸಿದ್ದಾರೆ.ಘಟನೆ ವಿವರ: ಮಾ.26 ರಂದು ಆರೋಪಿಗಳು ಕುಡಿಯುವ ನೀರು ಕೇಳುವ ನೆಪದಲ್ಲಿ ರಾಷ್ಟ್ರೀಯ ಹೆದ್ದಾರಿ 75 ರ ಸಮೀಪದ ಕುಣಿಗಲ್ ತಾಲ್ಲೂಕಿನ ಉರ್ಕೆಹಳ್ಳಿ ಗ್ರಾಮದ ತೋಟದ ಒಂಟಿ ಮನೆಗೆ ನುಗ್ಗಿದ ದರೋಡೆಕೋರರು ಮನೆ ಮಾಲೀಕ ಗಂಗಯ್ಯ, ಅತನ ಹೆಂಡತಿ, ಗಂಗಮ್ಮ , ಮಗಳು ಪುಷ್ಪಲತಾ ಅವರನ್ನು ಬಂದೂಕಿನಿಂದ ಹೆದರಿಸಿ ಗಂಗಯ್ಯನ ಮೇಲೆ ಗುಂಡು ಹಾರಿಸಿ ಲ್ಯಾಪ್ ಟಾಪ್ ಬ್ಯಾಗ್ನಲ್ಲಿದ್ದ ನಗದು ದೋಚಿಕೊಂಡು ದ್ವಿಚಕ್ರವಾಹನದಲ್ಲಿ ಪರಾರಿಯಾಗಿದರು.
ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ: ಘಟನೆ ಸಂಬಂಧ ಸ್ಥಳಕ್ಕೆ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಭೇಟಿ ನೀಡಿ ಪರಿಶೀಲಿಸಿದರು. ಘಟನಗೆ ಸಂಬಂಧಿಸಿದಂತೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದರು.
ಪೊಲೀಸ್ ತಂಡ ರಚನೆ: ಘಟನೆಯನ್ನು ಗಂಭೀರವಾಗಿ ತಗೆದುಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಕೇಂದ್ರ ವಲಯ, ಐಜಿಪಿ ರವಿಕಾಂತೇಗೌಡ, ಜಿಲ್ಲಾ ಎಸ್.ಪಿ ಅಶೋಕ್, ಎಎಸ್ಪಿ ಮರಿಯಪ್ಪ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಓಂಪ್ರಕಾಶ್, ಸಿಪಿಐ ನವೀನ್ ಗೌಡ ನೇತೃತ್ವದಲ್ಲಿ ಪೊಲಿಸ್ ತಂಡವನ್ನು ರಚಿಸಿದರು.
ಅಣ್ಣನ ನೋಡಲು ಬಂದ ಆರೋಪಿ: ಆರೋಪಿ ಜಾರ್ಖಂಡ್ ರಾಜ್ಯದ ಮೂಲದ ಎಜಾಜ್ ತನ್ನ ಅಣ್ಣ ಕೆಲಸ ಮಾಡುತ್ತಿರುವ ಕರ್ನಾಟಕದ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿಗೆ ಹಲವು ಭಾರಿ ಬಂದು ಅಣ್ಣನನ್ನು ಬೇಟಿ ಮಾಡಿ ಹೋಗಿದನ್ನು ಎನ್ನಲಾಗಿದೆ.ಬೈಕ್ ಕಳ್ಳತನ !: ಅಣ್ಣನನ್ನು ನೋಡಲು ಬಂದ ಏಜಾಜ್ ಮತ್ತು ಸಹೇಬ್ಉಲ್ಲಾ ಜಾರ್ಖಂಡ್ನಿಂದ ಬಂದುಕು ತೆಗೆದುಕೊಂಡು ಬಂದು, ಬೆಂಗಳೂರಿನಲ್ಲಿ ಬೈಕ್ ಕದ್ದಿದರು ಎನ್ನಲಾಗಿದ್ದು ಕುಣಿಗಲ್ ಮಾರ್ಗವಾಗಿ ತುರುವೇಕೆರೆಗೆ ಹೊಗುತ್ತಿದ್ದ ವೇಳೆ ಉರ್ಕೆಹಳ್ಳಿ ಒಂಟಿ ಮನೆಯನ್ನು ಟಾರ್ಗೇಟ್ ಮಾಡಿ ಕುಡಿಯುವ ನೀರು ಕೇಳುವ ನೆಪದಲ್ಲಿ ಮನೆ ಒಳಗೆ ನುಗ್ಗಿ ದರೋಡೆ ಮಾಡಿದ್ದಾರೆ. ಬಳಿಕ ಬೈಕ್ ನಲ್ಲಿ ಪರಾರಿಯಾಗಿದರು.
ಆರೋಪಿಗಳ ಎಡೆಮುಡಿ ಕಟ್ಟಿದ ಪೊಲೀಸರು; ಘಟನೆಯನ್ನು ಸವಾಲಾಗಿ ತೆಗೆದುಕೊಂಡ ಪೊಲೀಸರ ತಂಡವು ಆರೋಪಿಗಳ ಪತ್ತೆಗೆ ವಿವಿಧೆಡೆ ಕಾರ್ಯಚರಣೆ ನಡೆಸಿತು. ಬಳಿಕ ಆರೋಪಿಗಳಾದ ಎಜಾಜ್ ಮತ್ತು ಸಹೇಬ್ಉಲ್ಲಾ ಎಡೆಮುಡಿ ಕಟ್ಟಿ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಗರೀಕರ ಪ್ರಶಂಸೆ: ಘಟನೆ ನಡೆದು ಕೇವಲ ಐದು ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕಾರ್ಯಚರಣೆಗೆ ತಾಲ್ಲೂಕಿನ ನಾಗರೀಕರು ಪ್ರಶಂಸಿದ್ದಾರೆ.