ಬೆಂಗಳೂರು: ಗ್ಯಾಸ್‍ಗೀಸರ್‍ನಿಂದ ವಿಷಾನಿಲ ಸೋರಿಕೆಯಾಗಿಇಬ್ಬರು ಮೃತಪಟ್ಟಿರುವಘಟನೆ ಬೆಂಗಳೂರಿನ ಚಿಕ್ಕಜಾಲದ ತಬರನಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಜೂನ್10ರಂದ ಇಬ್ಬರುಒಟ್ಟಿಗೆ ಸ್ನಾನ ಮಾಡುವ ವೇಳೆ ವಿಷಾನಿಲ ಉತ್ಪತ್ತಿಯಾಗಿ ಬಾತ್‍ರೂಮ್‍ತುಂಬಿಕೊಂಡು ಸ್ನಾನಮಾಡುತ್ತಿದ್ದಇಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಗುಂಡ್ಲುಪೇಟೆ ಮೂಲದಚಂದ್ರಶೇಖರ್‍ಗೋಕಾಕ್‍ನ ಸುಧಾರಾಣಿಎಂಬುವರೇ ಮೃತಪಟ್ಟಿರುವ ದುರ್ದೈವಿಗಳು.ಇಂದು ಬೆಳಿಗ್ಗೆ ಮನೆ ಮಾಲೀಕರು ಪರಿಶೀಲನೆ ನಡೆಸಿದಾಗ ಇವರಿಬ್ಬರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಸುಧರಾಣಿ ಜೂನ್10ರಂದು ಚಂದ್ರಶೇಖರ್ ಮನೆಗೆ ಬಂದಿದ್ದು, ಈ ಘಟನೆ ಸಂಭವಿಸಿದೆ.ಮೃತಚಂದ್ರಶೇಖರ್ ಹಾಗೂ ಸುಧರಾಣಿಒಂದೇ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದು, ಮದುವೆಯಾಗಲು ನಿರ್ಧರಿಸಿದ್ದರು ಎನ್ನಲಾಗಿದೆ.
ಚಂದ್ರಶೇಖರ್ ತಬರನಳ್ಳಿಯಲ್ಲಿ ಬಾಡಿಗೆ ಮನೆ ಮಾಡಿದ್ದರುಎಂದು ಹೇಳಲಾಗಿದ್ದು, ಘಟನೆ ಸಂಬಂಧಚಿಕ್ಕಜಾಲ ಪೊಲೀಸ್‍ಠಾಣೆಯಲ್ಲಿ ಪ್ರಕರಣದಾಖಲಾಗಿದೆ.
Leave a Review