ಬೆಂಗಳೂರು: ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿ ಎಫ್ ಡಬ್ಲೂ÷್ಯ ರಸ್ತೆಯಲ್ಲಿರುವ ಎಲ್ ಅಂಡ್ ಟಿ ಫ್ಯಾಕ್ಟರಿ ಮುಂಭಾಗ ಚಾಲಕ ಎಲೆಕ್ಟಿçಕ್ ಕಾರನ್ನು ಅತಿ ವೇಗವಾಗಿ ಚಲಾಯಿಸಿ ಆಯಾ ತಪ್ಪಿ ರಸ್ತೆ ವಿಭಜಗಕ್ಕೆ ಡಿಕ್ಕಿ ಹೊಡೆದುಕೊಂಡು ಮಧ್ಯರಾತ್ರಿ ಮೂರುವರೆ ಗಂಟೆಯಲ್ಲಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಗುಲ್ಬರ್ಗ ಜಿಲ್ಲೆಯ ಸುನಿಲ್ ಕುಮಾರ್(೨೭) ಎಂಬ ವ್ಯಕ್ತಿ ಪೀಣ್ಯ ಬಳಿಯ ಮಲ್ಲಸಂದ್ರದಲ್ಲಿ ವಾಸವಾಗಿದ್ದು ವೃತ್ತಿಯಲ್ಲಿ ಕಾರು ಚಾಲಕನಾಗಿರುತ್ತಾನೆ.
ಜಾಲಳ್ಳಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ. ಮತ್ತೊAದು ಅಪಘಾತ ಪ್ರಕರಣ ಆಡುಗೋಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೋರಮಂಗಲದ ಎನ್ಜಿವಿ ಬಳಿ ಇರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಒಳಗಡೆ ನಿನ್ನೆ ಹೋಂಡಾ ಆಕ್ಟಿವಾ ದ್ವಿಚಕ್ರವಾಹನದಲ್ಲಿ ತಾತ ಅಜ್ಜಿ ಮೊಮ್ಮಗಳು ಪೆಟ್ರೋಲ್ ಬಂಕಿಗೆ ಬಂದು ಪೆಟ್ರೋಲ್ ಹಾಕಿಸುವ ಸಮಯದಲ್ಲಿ ತನುಶ್ರೀ ನಾಲ್ಕು ವರ್ಷದ ಹೆಣ್ಣು ಮಗುವನ್ನು ಹೋಂಡಾ ಆಕ್ಟಿವಾ ದ್ವಿಚಕ್ರವಾಹನದಿಂದ ಕೆಳಗೆ ಇಳಿಸಿ ಪೆಟ್ರೋಲ್ ಹಾಕಿಸುವ ಸಮಯದಲ್ಲಿ ತನುಶ್ರೀ ಓಡಾಡುವಾಗ ಟೆಂಪೋ ಟ್ರಾವೆಲರ್ಗೆ ಸಿಕ್ಕಿ ಮೃತಪಟ್ಟಿರುತ್ತಾಳೆ.
ತನುಶ್ರೀಯ ತಾತ ಇಳಂಗೋ ರವರು ಟೆಂಪೋ ಚಾಲಕನ ವಿರುದ್ಧ ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ.



