ಬೆಂಗಳೂರು : ತಲಘಟ್ಟಪುರ ಮತ್ತು ಎಲೆಕ್ಟಾçನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ೨ ಪ್ರತ್ಯೇಕ ಅಪಘಾತಗಳು ಸಂಭವಿಸಿ ಇಬ್ಬರು ಮೃತಪಟ್ಟಿರುತ್ತಾರೆ. ತಲಘಟ್ಟಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ನೈಸ್ ರಸ್ತೆಯ ಬಳಿ ಲಾರಿ ಮೋಟರ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಭೂಪಾಲನ್ ಮುನಿರಾಜು ೪೦ ವರ್ಷದ ವ್ಯಕ್ತಿ ಮೃತಪಟ್ಟಿರುತ್ತಾರೆ.
ಎಲೆಕ್ಟಾçನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣ ವ್ಯಾಪ್ತಿಯ ಬೆಟ್ಟದಾಸನಪುರ ಜೆ ವಿ ಎಸ್ ಶಾಲೆಯ ಬಳಿ ಬಿಎಂಟಿಸಿ ಬಸ್ ಮೋಟರ್ ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಕಣಿರಾಜ್ ೨೮, ಮೂಲತಹ ತಮಿಳುನಾಡು ನಾಡು ರಾಜ್ಯದವನು ಮೃತಪಟ್ಟಿರುತ್ತಾನೆ. ತಲಘಟ್ಟಪುರ ಮತ್ತು ಎಲೆಕ್ಟಾçನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಅಪಘಾತ ಪ್ರಕರಣ ದಾಖಲಾಗಿರುತ್ತವೆ.



