ಬೆಂಗಳೂರು : ಹೊಸಕೋಟೆ ಮತ್ತು ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತಗಳು ಸಂಭವಿಸಿ ಇಬ್ಬರು ಮೃತಪಟ್ಟಿರುತ್ತಾರೆ.
ಹೊಸಕೋಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಕರಿಬೀಗನಹಳ್ಳಿ ಬಳಿ ಆಟೋರಿಕ್ಷಾ ಚಾಲಕ ನಾಯಿ ಅಡ್ಡ ಬಂದ ಪರಿಣಾಮ ನಾಯಿಯನ್ನು ತಪ್ಪಿಸಲು ಹೋಗಿ ಆಟೋ ಪಲ್ಟಿಯಾಗಿ ಮೃತಪಟ್ಟಿರುತ್ತಾನೆ.
ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಇಸ್ಲಾಂಪುರದ ಬಳಿ ಗುಜರಿ ಅಂಗಡಿಯಲ್ಲಿ ಸಾಮಾನುಗಳನ್ನು ವಿಲೇವಾರಿ ಮಾಡುವ ಸಮಯದಲ್ಲಿ ಚಾಲಕ ಮುನಿರಾಜು ಆಕಸ್ಮಿಕವಾಗಿ ಕ್ಯಾಂಟರ್ ವಾಹನ ಚಲಾಯಿಸಿ ಆಯಾ ತಪ್ಪಿ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಅಪಘಾತಕ್ಕೀಡಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ.



