ಬೆಂಗಳೂರು: ನೆಲಮಂಗಲ ಮತ್ತು ನಂದಗುಡಿ ಪೊಲೀಸ್ ಠಾಣ ವ್ಯಾಪ್ತಿಗಳಲ್ಲಿ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುತ್ತಾರೆ.
ನೆಲಮಂಗಲ ಸಂಚಾರಿ ಪೊಲೀಸ್ ಠಾಣ ವ್ಯಾಪ್ತಿಯ ಹೊಸ ನಿಗಲ್ ಬಳಿ ಲಾರಿ ಮೋಟಾರ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ರಾಜಣ್ಣ ೭೧ ವರ್ಷದ ವ್ಯಕ್ತಿ ಮೃತಪಟ್ಟಿರುತ್ತಾರೆ.
ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ವಡ್ಡಳ್ಳಿ ಗೇಟ್ ಬಳಿ ಅಂಜನಪ್ಪ ೪೩ ವರ್ಷದ ವ್ಯಕ್ತಿ ಅನುಮಾನಾಸ್ಪದವಾಗಿ ಬಿದ್ದು ಸತ್ತಿರುವ ಪ್ರಕರಣ ದಾಖಲಾಗಿತ್ತು .
ನಂದಗುಡಿ ಪೊಲೀಸರಿಗೆ ಶವ ಪರೀಕ್ಷೆಯ ನಂತರ ಇದು ಯಾವುದೋ ಅಪರಿಚಿತ ಗಾಡಿ ಡಿಕ್ಕಿ ಹೊಡೆದ ಪರಿಣಾಮೃತಪಟ್ಟಿರುತ್ತಾರೆ ಎಂದು ಬಂದ ವರದಿಯ ಮೇಲೆ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ.



