ಬೆಂಗಳೂರು: ಹೊಸಕೋಟೆ ಮತ್ತು ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಎರಡು ಪ್ರತ್ಯೇಕ ಅಪಘಾತ ಸಂಭವಿಸಿ ವ್ಯಕ್ತಿಗಳು ಮೃತಪಟ್ಟಿರುತ್ತಾರೆ.
ಹೊಸಕೋಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕನಹಳ್ಳಿ ಬಳಿ ಎರಡು ದ್ವಿಚಕ್ರ ವಾಹನಗಳು ಪರಸ್ಪರ ಡಿಕ್ಕಿಯಾಗಿ ರಾಜು ಕೂಲಿ ಕೆಲಸ ಮಾಡುವ ವ್ಯಕ್ತಿ ಮೃತಪಟ್ಟಿರುತ್ತಾನೆ.
ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ವೆಂಕಟಗಿರಿ ಕೋಟೆ ಬಳಿ ಜಾರ್ಖಂಡ್ ರಾಜ್ಯದ ಎಂಬಿಎ ವಿದ್ಯಾರ್ಥಿ ರಸ್ತೆದಾಟುವ ಸಮಯದಲ್ಲಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಮುಕೇಶ್ ಶರ್ಮ 25 ಮೃತಪಟ್ಟಿರುತ್ತಾನೆ.



