ಬೆಂಗಳೂರು: ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಲಾರಿ ಅತಿ ವೇಗದಿಂದ ಬಂದು ಮೋಟರ್ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿರುತ್ತಾನೆ.
ಈ ಘಟನೆಯು ಮೈಸೂರು ರಸ್ತೆಯ ನ್ಯೂ ಗುಡ್ಡದಹಳ್ಳಿ ಸಿಗ್ನಲ್ ಬಳಿ ಸಂಭವಿಸಿರುತ್ತದೆ.ಅಪಘಾತವಾದ ತಕ್ಷಣ ಗಾಯಾಳುವನ್ನು ಹತ್ತಿರದ ಕಾನ್ಫಿಡೆಂಟ್ ಆಸ್ಪತ್ರೆಗೆ ಅಡ್ಮಿಟ್ ಮಾಡಿರುತ್ತಾರೆ, ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿ ಮೃತಪಟ್ಟಿರುತ್ತಾನೆ.
ಮೋಟಾರ್ ಬೈಕ್ ಸವಾರ ಕಿಶೋರ್(30) ಎಂಬಾತನೇ ಮೃತ ವ್ಯಕ್ತಿ. ಬ್ಯಾಟರಾಯನಪುರ ಸಂಚಾರಿ ಪೊಲೀಸರು ಟ್ಯಾಂಕರ್ ಚಾಲಕನನ್ನು ಬಂಧಿಸಿರುತ್ತಾರೆ.
ಮತ್ತೊಂದು ಅಪಘಾತ ಪ್ರಕರಣದಲ್ಲಿ ಆರ್ ಆರ್ ಆರ್ಚ್ ಬಳಿ ರಸ್ತೆದಾಟುತ್ತಿದ್ದ ಮಹಿಳೆಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ…
ಚಿಕಿತ್ಸೆ ಫಲಕಾರಿಯಾಗದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.
ನಾಸಿಮಾ (60)ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮೃತಪಟ್ಟಿರುತ್ತಾರೆ, ಬ್ಯಾಟರಾಯನಪುರ ಸಂಚಾರಿ ಪೆÇಲೀಸರು ಅಪರಿಚಿತ ವಾಹನ ಪತ್ತೆಗಾಗಿ ಮೈಸೂರು ರಸ್ತೆಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಗಳನ್ನು ಪರಿಶೀಲಿಸಿರುತ್ತಿರುತ್ತಾರೆ.