ಬೆಂಗಳೂರು: ಹೊಸಕೋಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಮೈಲಾಪುರ ಗೇಟ್ ಬಳಿ ಖಾಸಗಿ ಬಸ್ ಮೋಟಾರ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ 12 ವರ್ಷದ ಬಾಲಕ ಮೃತಪಟ್ಟಿರುತ್ತಾನೆ.
ಬೆಳಿಗ್ಗೆ 7:30 ಸುಮಾರಿಗೆ ತಂದೆ ಅನಿಲ್ ಸಿಂಗ್ ಜೊತೆಯಲ್ಲಿ ಸಂತೋಷ್ 12 ವರ್ಷದ ಬಾಲಕ ಎರಡನೇ ತರಗತಿ ಓದುತ್ತಿದ್ದು ಚಿಕ್ಕನಹಳ್ಳಿಯಿಂದ ಹೊಸಕೋಟೆಗೆ ಹೋಗುವ ಸಮಯದಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟಿರುತ್ತಾನೆ. ತಂದೆಗೆ ತೀವ್ರತರವಾದ ಗಾಯ ಸಂಭವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ.
ಮತ್ತೊಂದು ಅಪಘಾತ ಪ್ರಕರಣ ನೆಲಮಂಗಲ ಸರ್ಕಾರಿ ಪೊಲೀಸ್ ಠಾಣ ವ್ಯಾಪ್ತಿಯ ತುಮಕೂರ್ ಹೈವೇ ರಸ್ತೆಯಲ್ಲಿರುವ ನಮಸ್ತೆ ಹೋಟಲ್ ಮುಂಭಾಗ ಮೋಟಾರ್ ಬೈಕ್ ಸವಾರ ಕಲ್ಲೇಶ್ (20) ಹಾಗೂ ಅಕ್ಷಯ್ ಎಂಬ ಇಬ್ಬರು ಅತಿ ವೇಗವಾಗಿ ಬೈಕ್ ಚಲಾಯಿಸಿ ಸ್ಕಿಡ್ ಆಗಿ ಬಿದ್ದು ಕಲ್ಲೇಶ್ ಮೃತಪಟ್ಟರೆ ಅಕ್ಷಯ್ ಆಸ್ಪತ್ರೆ ಬಳಿ ಹೋದಾಗ ಸಂಭವಿಸಿರುತ್ತದೆ. ಮೃತ ಕಲ್ಲೇಶ್ ಆರ್ಚಿಡ್ ಎಂಬ ಕಂಪನಿಯಲ್ಲಿ ಪ್ಯಾಕಿಂಗ್ ಕೆಲಸ ಮಾಡುತ್ತಿದ್ದನು.
ಹೊಸಕೋಟೆ ಮತ್ತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.



