ಬೆಂಗಳೂರು : ರಾಜಾಜಿನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾನಂದ ನಗರ ಜಂಕ್ಷನ್ ಬಳಿ ಇಂದು ಬೆಳಿಗ್ಗೆ ಟಿಪ್ಪರ್ ಲಾರಿ ಮೋಟರ್ ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಕಲ್ಪನಾ(೨೮) ಎಂಬ ಹಿಂಬದಿ ಸವಾರಿ ಮೃತಪಟ್ಟಿರುತ್ತಾರೆ. ಬೋರೇಗೌಡ ಚಾಲಕನಿಗೆ ತೀವ್ರತರವಾದ ಪೆಟ್ಟು ಸಂಭವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾನೆ.
ಮತ್ತೊಂದು ಅಪಘಾತ ಪ್ರಕರಣ ಹೆಬ್ಬಾಳ ಸಂಚಾರಿ ಪೊಲೀಸ್ ಠಾಣ ವ್ಯಾಪ್ತಿಯ ಯೋಗೇಶ್ವರ ನಗರದ ಚರ್ಚ್ ಬಳಿ ಅಪರಿಚಿತ ವಾಹನ ಮೋಟಾರ್ ಬೈಕ್ ಸವಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸುಹಾಸ್ ಯಾದವ್(೨೮)ಎಂಬ ಚಾಲಕ ಮೃತಪಟ್ಟರೆ, ಈತನ ತಮ್ಮ ಸಂಜಯ್ ಯಾದವ್ ತೀವ್ರತರವಾದ ಗಾಯ ಸಂಭವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ.
ಮೂಲತಹ ತುಮಕೂರು ಜಿಲ್ಲೆಯವರಾಗಿದ್ದು ವೈಟ್ ಫೀಲ್ಡ್ ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿರುತ್ತಾರೆ, ಅಪಘಾತ ಇಂದು ಬೆಳಿಗ್ಗೆ ೭:೦೦ ಸುಮಾರಿಗೆ ಸಂಭವಿಸಿದೆ.ಹೆಬ್ಬಾಳ ಮತ್ತು ರಾಜಾಜಿನಗರ ಪೊಲೀಸರು ಎರಡು ಪ್ರಕರಣದ ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.