ಉತ್ತರಪ್ರದೇಶ: ನೀರು ಕಾಯಿಸುವಾಗ ವಾಟರ್ ಹೀಟರ್ನಿಂದ ವಿದ್ಯುತ್ ಸ್ಪರ್ಶಿಸಿ ಇಬ್ಬರು ಸಹೋದರಿಯರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮುಜಫರ್ ನಗರದ ರಾಂಪುರಿ ಪ್ರದೇಶದಲ್ಲಿ ಸಂಭವಿಸಿದೆ.
ಮೃತಳನ್ನು ನಿಧಿ (೨೧), ಆಕೆಯ ತಂಗಿ ಲಕ್ಷಿ÷್ಮ (೧೯) ಎಂದು ಗುರುತಿಸಲಾಗಿದೆ. ನಿಧಿ ಆಕಸ್ಮಿಕವಾಗಿ ಇಮ್ಮರ್ಶನ್ ರಾಡ್ ಸಂಪರ್ಕಕ್ಕೆ ಬಂದು ತೀವ್ರ ವಿದ್ಯುತ್ ಆಘಾತಕ್ಕೊಳಗಾಗಿದ್ದಾಳೆ ಎಂದು ವರದಿಯಾಗಿದೆ. ಇದನ್ನು ನೋಡಿದ ಆಕೆಯ ತಂಗಿ ಲಕ್ಷಿ÷್ಮ (೧೯) ಆಕೆಯ ರಕ್ಷಣೆಗೆ ಧಾವಿಸಿದರು, ಆದರೆ ಆಕೆಯೂ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾಳೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
ವಾಟರ್ ಹೀಟರ್ನಿಂದ ವಿದ್ಯುತ್ ಸ್ಪರ್ಶಿಸಿ ಸಹೋದರಿಯರಿಬ್ಬರು ದುರ್ಮರಣ



